ಬೆಂಗಳೂರು: ಕನ್ನಡ ಬಾವುಟ ಸುಟ್ಟ ಪುಂಡರ ವಿರುದ್ಧ ಕನ್ನಡಪರ ಸಂಘಟನೆ ತಿರುಗಿ ಬಿದ್ದಿದ್ದಾರೆ. ಅವರಿಗೆ ಬುದ್ದಿ ಕಲಿಸಲೆಂದೆ ಕನ್ನಡಪರ ಸಂಘಟನೆಗಳು ಟೊಂಕ ಕಟ್ಟಿ ನಿಂತಿವೆ. ಅವೆ ಸಂಘಟನೆಯನ್ನ ಬ್ಯಾನ್ ಮಾಡಲು ಒತ್ತಾಯಿಸಿ ಇದೇ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಬಂದ್ ಗೆ ಹಲವರು ಬೆಂಬಲ ಸೂಚಿಸಿದ್ರೆ ಇನ್ನು ಹಲವರು ವಿರೋಧ ವ್ಯಕ್ತಪಡಿಸುತ್ತಿವೆ.
ಈ ಸಂಬಂಧ ಸಂಸದೆ ಸುಮಲತಾ ಮಾತನಾಡಿದ್ದು, ಬಂದ್ ನಿಂದ ನಷ್ಟವಾಗುತ್ತೆ. ಈ ಬಂದ್ ನಿಂದಾಗಿ ಸಮಸ್ಯೆಗೆ ಪರಿಹಾರ ಸಿಗೋದಾದ್ರೆ ನನ್ನ ಕಡೆಯಿಂದಲೂ ಬೆಂಬಲ ಇದೆ ಎಂದಿದ್ದಾರೆ.
ಈ ಬಂದ್ ಮಾಡೋದ್ರಿಂದ ಸಾಕಷ್ಟು ನಷ್ಟ ಉಂಟಾಗುತ್ತದೆ. ಇದರಿಂದ ಬರೀ ಚಿತ್ರರಂಗಕ್ಕೆ ನಷ್ಟ ಅಂತ ಹೇಳ್ತಾ ಇಲ್ಲ. ವರ್ಷದ ಕೊನೆಯಲ್ಲಿ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗುತ್ತೆ. ಹೀಗಾಗಿ ವ್ಯಾಪಾರಿಗಳಿಗೂ ನಷ್ಟವಾಗುತ್ತೆ ಎಂದಿದ್ದಾರೆ. ಈಗಾಗಲೇ ಚಿತ್ರರಂಗದವರು ಕೂಡ ನೈತಿಕ ಬೆಂಬಲ ಸೂಚಿಸಿದೆ.