ದಾವಣೆಗೆರೆ ಜಿಲ್ಲೆಯ ಸೂಳೆಕೆರೆ ಏಷ್ಯಾದ ಎರಡನೇ ದೊಡ್ಡ ಕೆರೆ. ಈ ಕೆರೆಯ ನೀರನ್ನು ಸುಮಾರು ಹಳ್ಳಿಗಳಿಗೆ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಇದೀಗ ನೀರು ಕುಡಿಯಲು ಯೋಗ್ಯವಲ್ಲದ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ಈ ಕೆರೆಯಲ್ಲಿ ನಾಲ್ಕು ಲಕ್ಷ ಲೀಟರ್ ನೀರು ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿದೆ.
ಶುದ್ಧೀಕರಣ ಘಟಕದಲ್ಲಿರುವ ಫಿಲ್ಟರ್ ಹಾಳಾಗಿತ್ತು. ಈ ಹಿನ್ನೆಲೆ ಒಮ್ಮೊಮ್ಮೆ ನೀಲಿ, ಕೆಂಪು ಹೀಗೆ ಬೇರೆ ಬೇರೆ ಬಣ್ಣಕ್ಕೆ ನೀರು ತಿರುಗಿತ್ತು. ಜನ ಕೂಡ ಇದರ ಬಗ್ಗೆ ಸಾಕಷ್ಟು ಸಲ ದೂರು ನೀಡಿದ್ದರು. ಈಗ ಆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯಕ್ಕೆ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಹೀಗಾಗಿ ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ.
ಮೂರು ತಿಂಗಳ ಕಾಲ ನೀರನ್ನು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ದುರಸ್ಥಿಗೊಳಿಸಿದ ಬಳಿಕ ಮತ್ತೆ ಪ್ರಯೋಗಾಲಯಕ್ಕೆ ನೀರು ಕಳುಹಿಸಲಾಗುತ್ತದೆ. ಆ ಬಳಿಕ ಬರುವ ವರದಿಯ ಮೇಲೆ ಮತ್ತೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಹೊಳಲ್ಕೆರೆ, ಜಗಳೂರು, ಚಿತ್ರದುರ್ಗಕ್ಕೆ ಪೂರೈಕೆಯಾಗುತ್ತಿತ್ತು. ಈ ಸಂಬಂಧ ದಾವಣಗೆರೆ ಜಿಲ್ಲಾ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.