ಕಾರವಾರ: ಹಾಲಕ್ಕಿ ಸಮುದಾಯ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಈಬಸಮುದಾಯವನ್ನ ಪರಿಶಿಷ್ಠ ಜನಾಂಗಕ್ಕೆ ಸೇರಿಸಬೇಕೆಂದು ಸಾಕಷ್ಟು ಒತ್ತಾಯಗಳು ಕೇಳಿ ಬರ್ತಿದೆ. ಈ ಬಗ್ಗೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮನಗೌಡ ಕೂಡ ಒತ್ತಾಯ ಹಾಕಿದ್ದಾರೆ.
ಹಾಲಕ್ಕಿ ಜನಾಂಗವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸದೆ ಹೋದ್ರೆ ಕೇಂದ್ರ ಸರ್ಕಾರ ತಮಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನ ವಾಪಾಸ್ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಜನಾಂಗಕ್ಕಾಗಿ ವಿಧಾನಸೌಧದ ಮುಂದೆ ಧೆಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ ಜಾನಪದ ಕೋಗಿಲೆ ಸುಕ್ರಿ.
ಕಾಡನ್ನು ನಂಬಿ ಬದುಕು ಕಟ್ಟಿಕೊಂಡ ಹಾಲಕ್ಕಿ ಜನಾಂಗ ಈವರೆಗೂ ಸಂಕಷ್ಟದಲ್ಲಿದೆ. ನಮ್ಮಲ್ಲಿ ಶಿಕ್ಷಣ ಪಡೆದವರೇ ಕಮ್ಮಿ ಜನರಿದ್ದಾರೆ. ಅವರಿಗೆ ಉತ್ತಮ ಕೆಲಸ ಸಹ ಇಲ್ಲ. ಹೀಗಿರುವಾಗ ಕಳೆದ 20 ವರ್ಷದಿಂದ ನಮ್ಮ ಜನಾಂಗವನ್ನು ಪ.ಪಂಗಡಕ್ಕೆ ಸೇರಿಸಬೇಕು ಎಂಬ ಹೋರಾಟ ನಡೆಯುತ್ತಲೇ ಇದೆ ಎಂದಿದ್ದಾರೆ.