ನವದೆಹಲಿ: ಹಿಜಾಬ್ ವಿವಾದ ವಿಚಾರಕ್ಕೆ ಶಾಸಕ ಎಂ ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಶಾಂತಿ ಕಾಪಾಡಲು ನಾನು ಮಧ್ಯಪ್ರವೇಶ ಮಾಡಿ ಹೇಳಿದ್ದೇನೆ ಎಂದಿದ್ದಾರೆ.
ಹಿಜಬ್ – ಕೇಸರಿ ಸಂಘರ್ಷದ ಬದಲು ಶಾಂತಿ ಸಾಮರಸ್ಯ ಕಾಪಾಡಿಕೊಳ್ಳಬೇಕು. ನಮ್ಮ ಕರ್ನಾಟಕ ಶಾಂತಿ ಸಾಮರಸ್ಯಕ್ಕೇನೆ ಹೆಸರುವಾಸಿ. ಸಮವಸ್ತ್ರ ಧರಿಸಲು ನಮ್ಮ ಸರ್ಕಾರ ಸೂಚಿಸಿದೆ. ಸರ್ಕಾರ ನೀಡಿದ ಸೂಚನೆಗಳನ್ನು ನಾವೂ ಪಾಲಿಸಬೇಕು. ಹೈಕೋರ್ಟ್ ಹೇಳುವುದನ್ನು ಕೇಳಬೇಕು ಅಲ್ವಾ.
ಕಾಲೇಜು ಆವರಣದಲ್ಲಿ ಧಾರ್ಮಿಕ ಸಮವಸ್ತ್ತ ಬೇಡ. ಅಲ್ಪ ಸಂಖ್ಯಾತ ಮುಖಂಡರು ಇದಕ್ಕೆಲ್ಲಾ ಪ್ರಚೋದನೆ ನೀಡಬಾರದು. ಎಲ್ಲರೂ ಒಟ್ಟಾಗಿ ಹೋಗೋಣಾ. ಸುನೀಲ್ ಕುಮಾರ್ ಹಾಗೂ ಈಶ್ವರಪ್ಪ ಕೂಡ ಅದನ್ನೇ ಹೇಳಿದ್ದು. ಸರ್ಕಾರದ ನಿಯಮ ಪಾಲಿಸಿ ಎಂದಿದ್ದಾರೆ ವಿನಃ ಯಾವುದೇ ಪ್ರಚೋದನೆ ನೀಡಿಲ್ಲ. ಆದರೆ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಈ ವಿಚಾರವನ್ನ ಮೂಲಭೂತ ಹಕ್ಕು ಎಂದು ಪ್ರಚೋದನೆ ನೀಡುತ್ತಿದ್ದಾರೆ. ಇದರಲ್ಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಾ ಇದೆ ಎಂದು ಕಿಡಿಕಾರಿದ್ದಾರೆ.