ಸಿದ್ದರಾಮಯ್ಯ ಮಾತಿಗೆ ಸುಧಾಕರ್ ಗರಂ : ಅಧಿಕಾರಕ್ಕೆ ಬರಲ್ಲ, ಮಸೂದೆ ಕ್ಯಾನ್ಸಲ್ ಆಗಲ್ಲ ಎಂದು ಕಿಡಿ..!

1 Min Read

 

ಬೆಂಗಳೂರು: ಈ ಬಾರಿ ಅಧಿಕಾರಕ್ಕೆ ಬಂದ್ರೆ ಈಗ ಜಾರಿಯಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನ ವಾಪಾಸ್ ಪಡೆಯುತ್ತೇವೆ ಎಂದು ನಿನ್ನೆಯಷ್ಟೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಇದೀಗ ಆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಸುಧಾಕರ್, ಅವರು ಅಧಿಕಾರಕ್ಕೆ ಬರಲ್ಲ ಬಿಡಿ ಎಂದಿದ್ದಾರೆ.

ಒಂದು ವಾರಕ್ಕೆ ಮಸೂದೆ ರದ್ದು ಮಾಡ್ತೀವಿ ಅಂತ ಹೇಳಿದ್ದಾರೆ. ಅವ್ರು ಅಧಿಕಾರಕ್ಕೆ ಬರಲ್ಲ ಮಸೂದೆ ರದ್ದಾಗಲ್ಲ ಎಂದಿದ್ದಾರೆ. ಅವ್ರು ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಿದ್ದೆ ಈ ರೀತಿಯ ಹೇಳಿಕೆಯನ್ನ ನೀಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಇನ್ನು ಮತಾಂತರ ನಿಷೇಧ ಕಾಯ್ದೆಗೆ ಸಾಕಷ್ಟು ವಿರೋಧವಿತ್ತು. ಆ ವಿರೋಧದ ನಡುವೆಯೂ ಬಿಜೆಪಿ ಸರ್ಕಾರ ಮಸೂದೆಯನ್ನ ಪಾಸ್ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *