
ಕನಕಪುರ: ಸಚಿವ ಸುಧಾಕರ್ ಅದ್ಯಾವಾಗ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮೇಲೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಲೆ ಇರುತ್ತಾರೆ. ಆದ್ರೆ ಇದೀಗ ಡಿಕೆ ಬ್ರದರ್ಸ್ ಜೊತೆಗೆ ಒಂದೇ ವೇದಿಕೆ ಹಂಚಿಕೊಂಡಿದ್ದ ಸಚಿವ ಸುಧಾಕರ್, ಹೊಗಳಿಕೆಯ ಮಾತನ್ನು ಆಡಿದ್ದಾರೆ.

ಕನಕಪುರದಲ್ಲಿ ತಾಯಿ – ಮಕ್ಕಳ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಧಾಕರ್, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸಚಿವ ಸುಧಾಕರ್, ಡಿಕೆ ಶಿವಕುಮಾರ್ ಹೇಗೆ ಕನಕಪುರದಲ್ಲಿ ಗೆಲುವು ಕಾಣುತ್ತಾರೆ ಎಂಬುದು ಗೊತ್ತಿದೆ ಎಂದಿದ್ದಾರೆ.
ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೊದಲಿಗೆ ಚುನಾವಣೆಯಲ್ಲಿ ಕಡಿಮೆ ಮತಗಳಿಂದ ಗೆಲುವು ಸಾಧಿಸುತ್ತಿದ್ದರು. ಆದರೆ ಈಗ ಸುಮಾರು 75 ಸಾವಿರ ಅಂತರಗಳಿಂದ ಗೆಲ್ಲುತ್ತಿದ್ದಾರೆ. ನರೇಗಾದಲ್ಲಿ ಡಿಕೆಶಿ ಕ್ರಾಂತಿಯನ್ನೇ ಮಾಡಿದ್ದಾರೆ. ಒಳ್ಳೆಯದ್ದನ್ನು ಮಾಡಿದಾಗ ವಿರೋಧ ಪಕ್ಷದವರೇ ಆದರೂ ಹೊಗಳಬೇಕು. ಕನಕಪುರಕ್ಕೆ ಮೂರು ಕಣ್ಣುಗಳಿವೆ. ಡಿಕೆ ಶಿವಕುಮಾರ್, ಡಿಕೆ ಸುರೇಶ್ ಮತ್ತು ಎಂಎಲ್ಸಿ ರವಿ. ಇನ್ನು ಡಿಕೆ ಸುರೇಶ್ ಅದ್ಯಾವಾಗ ನಿದ್ದೆ ಮಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.
GIPHY App Key not set. Please check settings