ಬೆಂಗಳೂರು: ಚುನಾವಣಾ ಹತ್ತಿರವಾಗುತ್ತಿದ್ದಂತೆ ಹಲವು ಪಕ್ಷಗಳು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿರುತ್ತವೆ. ಅದರಲ್ಲಿ ಇದೀಗ ಬಿಜೆಪಿ ಜನೋತ್ಸವ ಕಾರ್ಯಕ್ರಮ ಮಾಡಲು ಹೊರಟಿತ್ತು. ಆದ್ರೆ ಜನೋತ್ಸವಕ್ಕೆ ಹಲವು ಅಡ್ಡಿಗಳಾಗುತ್ತಿದ್ದಂತೆ, ಜನಸ್ಪಂದನಾ ಎಂದು ಮರುನಾಮಕರಣ ಮಾಡಲಾಗಿದೆ. ನಾಳೆ ಈ ಕಾರ್ಯಕ್ರಮಕೆ ದಿನಾಂಕ ನಿಗಧಿಯಾಗಿದೆ. ಈಗಾಗಲೇ ಎಲ್ಲಾ ತಯಾರಿಯೂ ನಡೆದಿದೆ.
ನಾಳಿನ ಕಾರ್ಯಕ್ರಮಗಳಿಗೆ ವಿಘ್ನ ಎದುರಾಗದಂತೆ ಸಚಿವ ಸುಧಾಕರ್, ಹೋಮ ಹವನ ಮಾಡಲು ಶುರು ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ಮ ನಡೆಯುವ ವೇದಿಕೆಯಲ್ಲಿಯೇ ಸುಧಾಕರ್ ನೇತೃತ್ವದಲ್ಲಿ ಗಣಪತಿ ಹೋಮ ನಡೆದಿದೆ.
ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಈ ಕಾರ್ಯಕ್ರಮ ಮುಗಿಯಬೇಕಿತ್ತು. ಆದ್ರೆ ಎರಡು ಬಾರಿ ನಾನಾ ಕಾರಣದಿಂದ ಈ ಕಾರ್ಯಕ್ರಮ ಮುಂದೂಡಲ್ಲಪಟ್ಟಿದ್ದರು. ಮೂರನೇ ಬಾರಿ ವಿಘ್ನ ಎದುರಾಗದಂತೆ ಹೋಮ ಮಾಡಲಾಗಿದೆ.