ಬಿಗ್ ಬಾಸ್ ಗೆ ಸುದೀಪ್ ಗುಡ್ ಬೈ : ತಂದೆಯ ನಿರ್ಧಾರಕ್ಕೆ ಸಾನ್ವಿ ಹೇಳಿದ್ದೇನು..?

suddionenews
1 Min Read

ಬಿಗ್ ಬಾಸ್ 11 ವರ್ಷದ ಜರ್ನಿ. ಈ ಹತ್ತು ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕಿಚ್ಚ ಸುದೀಪ್ ಅವರೇ 11ನೇ ಸೀಸನ್ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಅದ್ಯಾಕೋ ಏನೋ ಬಿಗ್ ಬಾಸ್ ಜರ್ನಿಗೆ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ. ಇದು ನನ್ನ ಕಡೆಯ ಬಿಗ್ ಬಾಸ್ ಜರ್ನಿ ಎಂದೇ ಹೇಳಿದ್ದಾರೆ. ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಆಗಿದೆ.

 

ನಿನ್ನೆ ರಾತ್ರಿಯೇ ಕಿಚ್ಚ ಸುದೀಪ್ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಇದೀಗ ತಂದೆಯ ನಿರ್ಧಾರದ ಬಗ್ಗೆ ಮಗಳು ಸಾನ್ವಿ ಕೂಡ ಪೋಸ್ಟ್ ಹಾಕಿದ್ದಾರೆ. ತಂದೆಯ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.

‘ಅಪ್ಪ.. ಬಿಗ್ ಬಾಸ್ ಶೋನಲ್ಲಿ ನಿಮಗೆ ಬೇರೆ ಯಾರೂ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವೂ ನೀಡಿದ ಕೊಡುಗೆಯನ್ನು ನಾನು ಗೌರವಿಸುತ್ತೇನೆ. ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂಥದ್ದು. ಬೇರೆ ಯಾರೂ ಕೂಡ ನಿಮ್ಮ ರೀತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನೀವೂ ಅಮೋಘವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತೀರಿ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು, ನನಗೆ ಅತ್ಯಂತ ಸಂತೋಷವನ್ನು ತಂದಿದೆ. ಬಿಗ್ ಬಾಸ್ ಶೋಗಾಗಿ ನೀವೂ ಹಾಕಿದ ಪರಿಶ್ರಮಕ್ಕೆ ಸಾಟಿಯೇ ಇಲ್ಲ’ ಎಂದು ಸಾನ್ವಿ ಸುದೀಪ್ ಅವರು ತಂದೆಯ ಪೋಸ್ಟರ್ ಗೆ ರಿಪ್ಲೆ ಮಾಡಿದ್ದಾರೆ.

ವಾಹಿನಿ ಮತ್ತೆ ಏನಾದರೂ ಸುದೀಪ್ ಅವರನ್ನು ಮನವಿ ಮಾಡಿ ಮತ್ತೆ ನಿರೂಪಣೆಗೆ ಮುಂದುವರೆಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಈಗ ಸಾನ್ವಿ ಅವರು ಕೂಡ ಅಪ್ಪನ ನಿರ್ಧಾರ ಗೌರವಿಸುತ್ತೇನೆ ಎಂಬ ಪೋಸ್ಟ್ ಹಾಕಿರುವುದು, ಸುದೀಪ್ ಅವರು ಮತ್ತೆ ವಾಪಾಸ್ ಬರುವುದು ಅನುಮಾನವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks