‘ಸುದ್ದಿಒನ್’ ಗೆ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಸಹಯೋಗ : ಓದುಗ ದೊರೆಗಳಿಗೆ ಧನ್ಯವಾದ

2 Min Read

ಓದುಗ ದೊರೆಗಳೇ,

ಸುದ್ದಿಒನ್ ಬಳಗಕ್ಕೆ ಏನೇ ಕೀರ್ತಿಗಳು ಲಭಿಸಿದ್ದರೇ ಅದಕ್ಕೆಲ್ಲ ನೀವುಗಳೇ ಮುಖ್ಯ ಕಾರಣ. ಈಗ ಸುದ್ದಿಒನ್ ವೆಬ್‌ ಸೈಟ್ ವಿಶ್ವದ ಪ್ರಖ್ಯಾತ ಕಂಪನಿ ಜೊತೆ ಹೆಜ್ಜೆ ಹಾಕಲಿದೆ ಎಂಬ ಸಂಭ್ರಮದ ಸುದ್ದಿಯನ್ನು ಓದುಗರಿಗೆ ಮೊದಲು ತಿಳಿಸಲು ಸಂತಸಪಡುತ್ತೇವೆ.

ಸುದ್ದಿಒನ್ (suddione.com) ಆರಂಭದ ದಿನಗಳಲ್ಲಿ ನಮ್ಮ ಬಳಗದಲ್ಲಿ ಒಂದು ರೀತಿಯ ತಳಮಳ ಮನೆ ಮಾಡಿತ್ತು. ಮುದ್ರಣ, ದೃಶ್ಯ ಮಾಧ್ಯಮಗಳ ಅಬ್ಬರದ ಮಧ್ಯೆ ವೆಬ್ ಸೈಟ್ ಅನ್ನು ಓದುಗ ದೊರೆಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ನಮ್ಮಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಸುದ್ದಿಒನ್ ವೆಬ್ ಸೈಟ್ ಅನ್ನು ಓದುಗ ದೊರೆಗಳು ನಮ್ಮ ನಿರೀಕ್ಷೆಗೂ ಮೀರಿ ಸ್ಪಂದಿಸಿದರು.

ನಿಮ್ಮಂತಹ ಆತ್ಮೀಯರು, ಗೆಳೆಯರು, ಓದುಗರು, ವಿವಿಧ ಮಠಾಧೀಶರು, ಸಂಘ-ಸಂಸ್ಥೆಗಳ ಮುಖಂಡರು, ಹೋರಾಟಗಾರರು ಅಷ್ಟೇ ಏಕೆ ನಮಗೆ ಪರಿಚಿತರೇ ಅಲ್ಲದವರು ಫೋನ್ ಮಾಡಿ ಪ್ರೋತ್ಸಾಹದ ಮಾತುಗಳನ್ನು ಹೇಳಿ ಉತ್ಸಾಹ ತುಂಬಿದರು.

ಆ ನಿಮ್ಮ ಮಾತುಗಳೇ ವೆಬ್ ಸೈಟ್ ಒಂದು  (website) ವಿಶೇಷ ಸಂಚಿಕೆ ಹೊರತರಬಹುದು ಎಂಬುದನ್ನು ಸಾದರಪಡಿಸಲು ಸಾಧ್ಯವಾಯಿತು. ಆ ವಿಶೇಷ ಸಂಚಿಕೆಯಲ್ಲಿ ಲೇಖನಗಳು, ಗುಣಮಟ್ಟದ ಕಾಗದ, ಪುಟ ವಿನ್ಯಾಸ ಕಂಡು ನೀವು ವ್ಯಕ್ತಪಡಿಸಿದ ಮೆಚ್ಚುಗೆ ಮಾತು ಮರೆಯಲು ಸಾಧ್ಯವೇ ಇಲ್ಲ.

ನಿಮ್ಮಲ್ಲಿನ ಬೆನ್ನು ತಟ್ಟುವ ಗುಣದ ಫಲ ಇಂದು ವಿಶ್ವದ ಪ್ರಖ್ಯಾತ ಸಂಸ್ಥೆ ಗೂಗಲ್ ಕಂಪನಿ (google) ನಮ್ಮನ್ನು ಗುರುತಿಸಿ, ತಮ್ಮೊಂದಿಗೆ ಹೆಜ್ಜೆ  ಹಾಕುವಂತೆ ಆಹ್ವಾನ ನೀಡಿದೆ. ಅಷ್ಟೇ ಅಲ್ಲ ಗೂಗಲ್ ಕಂಪನಿ  ಸುದ್ದಿಒನ್ ವೆಬ್ ಸೈಟ್ ಗಾಗಿಯೇ ಆ್ಯಪ್ ಮಾಡಿಕೊಟ್ಟಿದೆ. ನಮ್ಮ ಮಟ್ಟಿಗೆ ಇದೊಂದು ಮೈಲಿಗಲ್ಲು ಎಂದೇ ಭಾವಿಸಿದ್ದೇವೆ.

Suddione google play store and apple store

ಜಗತ್ತಿನ ಪ್ರತಿಷ್ಠಿತ ಸಂಸ್ಥೆ ನಮ್ಮನ್ನು ಗುರುತಿಸಿ, ಸಹಯೋಗ ಮಾಡಿಕೊಳ್ಳುತ್ತಿರುವುದರ ಹಿಂದೆ ಓದುಗ ದೊರೆಗಳಾದ ನಿಮ್ಮ ಪ್ರೋತ್ಸಾಹವೇ ಮುಖ್ಯ ಕಾರಣ. ಆದ್ದರಿಂದ ಈ ಸಿಹಿ ಸುದ್ದಿಯನ್ನು ಮೊದಲಿಗೆ ನಿಮಗೆ ಮುಟ್ಟಿಸುವಲ್ಲಿ ಹೆಚ್ಚು ಸಂಭ್ರಮಿಸುತ್ತಿದ್ದೇವೆ.

ಇನ್ನು ಮುಂದೆ ಸುದ್ದಿಒನ್ ಬಿತ್ತರಿಸುವ ಸುದ್ದಿಗಳನ್ನು ಆ್ಯಪ್ ನಲ್ಲಿ ಸುಲಭವಾಗಿ ಓದುಗರು ಅಸ್ವಾಧಿಸಬಹುದು ಎಂಬ ವಿಷಯ ತಿಳಿಸಲು ಹರ್ಷಿಸುತ್ತೆವೆ.

ಈ ನಮ್ಮ ಸಂಭ್ರಮಕ್ಕೆ ಬಹುದೊಡ್ಡ ಬುನಾದಿ ಆಗಿರುವ ಓದುಗ ದೇವರುಗಳಾದ ನಿಮಗೆ ಹಾಗೂ ನಮ್ಮ ಶ್ರಮ, ಗುಣಮಟ್ಟದ ಸುದ್ದಿ, ವೇಗದ ಕೆಲಸ ಕಂಡು ಕನ್ನಡದ ವೆಬ್ ಸೈಟ್ ಸುದ್ದಿಒನ್ ಅನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡಿರುವ ಗೂಗಲ್ ಕಂಪನಿಗೂ ಮತ್ತು ನಮ್ಮ ಸುದ್ದಿಒನ್ ವೆಬ್ ಸೈಟ್ ಅನ್ನು ನಿಮ್ಮ ಕುಟುಂಬದ ಸದಸ್ಯರನ್ನಾಗಿ ಮಾಡಿಕೊಂಡಿರುವ ನಿಮಗೂ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಿಮ್ಮ ಪ್ರೀತಿ ಹೀಗೆ ಮುಂದುವರೆಯಲಿ ಸದಾ ಕಾಲ…..

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ APP download ಮಾಡಿಕೊಳ್ಳಿ, ಎಂದಿನಂತೆ ಪ್ರೋತ್ಸಾಹಿಸಿ, ಆಶೀರ್ವದಿಸಿ.

Suddione Google App And Suddione IOS App

ಇಂತಿ
ನಿಮ್ಮವ
ಪಿ.ಎಲ್.ನಾಗೇಂದ್ರರೆಡ್ಡಿ 

Share This Article
Leave a Comment

Leave a Reply

Your email address will not be published. Required fields are marked *