ದಿಢೀರ್ ಇಳಿಕೆಯಾದ ಈರುಳ್ಳಿ ಬೆಲೆ : ಬಳ್ಳಾರಿ ರೈತರ ಕಣ್ಣೀರ ಕಥೆ

1 Min Read

ಬಳ್ಳಾರಿ: ಮೊದಲೇ ಮಳೆಯಿಂದಾಗಿ ಕೆಲ ಬೆಳೆಗಳನ್ನ ಉಳಿಸಿಕೊಳ್ಳುವುದಕ್ಕೆ ರೈತ ಹರಸಾಹಸ ಪಡ್ತಾ ಇದ್ದಾನೆ. ಅದರಲ್ಲೂ ಈರುಳ್ಳಿ ಬೆಳೆ‌ ಕೈಗೆ ಫಲ ಸಿಗುವ ಸಮಯ. ಈ ಸಮಯದಲ್ಲಿ ಹೊಲದಲ್ಲೇನಾದ್ರೂ ನೀರು ತುಂಬಿದ್ರೆ ಕಥೆ ಮುಗೀತು. ಇಂಥ ಸಮಯದಲ್ಲಿ ಇದ್ದಕ್ಕಿದ್ದ ಹಾಗೇ ಈರುಳ್ಳಿ ಬೆಳೆಯಲ್ಲಿ ದಿಢೀರನೇ ಒಂದು ಸಾವಿರ ರೂಪಾಯಿ ಕಡಿಮೆಯಾದರೆ ಏನು ಮಾಡಬೇಕು. ಅಂಥದ್ದೇ ನೋವಲ್ಲಿ ಬಳ್ಳಾರಿ ಭಾಗದ ರೈತರಿದ್ದಾರೆ.

ಈರುಳ್ಳಿ ಬೆಳೆದ ಹೂವಿನಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ಈಗ ದರ ಇಲ್ಲದೆ ಇರುವ ಕಾರಣ ಹೊಲದಲ್ಲಿಯೇ ಈರುಳ್ಳಿ ಬೆಳೆಯನ್ನು ಬಿಟ್ಟಿದ್ದಾರೆ. ಇನ್ನು ಈರುಳ್ಳಿ ಬೆಲೆಗೆ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಕ್ವಿಂಟಾಲ್ ಗೆ 2500-3000 ಸಾವಿರ ರೂಪಾಯಿ ಇತ್ತು. ಆದ್ರೆ ಈಗ ಏಕಾಏಕಿ 1500 ರೂಪಾಯಿಗೆ ಕುಸಿದಿದೆ. ಇದು ರೈತರಿಗೆ ಶಾಕ್ ಎನಿಸಿದೆ.

ಈರುಳ್ಳಿ ಬೆಲೆ ಕಟಾವಿಗೆ ಬಂದಿದೆ. ಆದ್ರೆ ಈ ಸಮಯದಲ್ಲಿ ಕಟಾವು ಮಾಡಿ, ಮಾರುಕಟ್ಟೆಗೆ ಸಾಗಾಟ ಮಾಡಿದರೆ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂಬ ಆತಂಕ ರೈತರದ್ದು. ಸದ್ಯ ಇರುವ ಬೆಲೆಗೆ ಈರುಳ್ಳಿ ಮಾಡಿದರೆ ಬೆಳೆ ಬೆಳೆಯೋಕೆ ಮಾಡಿದಷ್ಟು ಖರ್ಚು ಕೂಡ ಹುಟ್ಟಲ್ಲ ಎಂಬ ಭಯ ರೈತರಲ್ಲಿ ಕಾಡ್ತಿದೆ. ಮೊದಲು ಸೂಕ್ತ ಬೆಲೆ ನಿಗದಿ ಮಾಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈರುಳ್ಳಿ ಬೆಳೆಗಾರ ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *