ಬೆಂಗಳೂರು: ನಿನ್ನೆಯಿಂದ ಐಪಿಎಸ್ ಅಧಿಕಾರಿ ಡಿ ರೂಪಾ ಸೋಷಿಯಲ್ ಮೀಡಿಯಾದಲ್ಲಿ ಹರಿಹಾಯುತ್ತಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಒಂದೊಂದೆ ಒಂದೊಂದೆ ದಾಖಲೆಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಮೊದಲಿಗೆ ಹಲವು ಹಗರಣಗಳು, ಡಿಕೆ ರವಿ ಜೀವನದ ಬಗ್ಗೆ ಮಾತನಾಡಿದ್ದ ಡಿ ರೂಪಾ, ಬಳಿಕ ಖಾಸಗಿ ಫೋಟೋಗಳನ್ನು ಕಳುಹಿಸಿ ಉತ್ತೇಜನ ನೀಡುತ್ತಿದ್ದ ಬಗ್ಗೆ ತಿಳಿಸಿದ್ದರು. ಆ ಫೋಟೋಗಳನ್ನು ರಿಲೀಸ್ ಮಾಡಿದ್ದರು. ಉನ್ನತ ಹುದ್ದೆಯಲ್ಲಿರುವವರೇ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ವರ್ತಿಸಿದ್ದನ್ನು ಕಂಡು ಜನ ಆಶ್ಚರ್ಯವಾಗಿದ್ದರು. ಇದೀಗ ಈ ಪ್ರಕರಣಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಎಂಟ್ರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಸರ್ಕಾರ ಕಣ್ಮುಚ್ಚಿ ಕುಳಿತಿಲ್ಲ. ಅವರಿಬ್ಬರ ಮೇಲೂ ಕ್ರಮ ಕೈಗೊಳ್ಳುತ್ತದೆ. ಇಂತಹ ಕೆಟ್ಟ ವರ್ತನೆ ನಿಜಕ್ಕೂ ದೊಡ್ಡ ಅಪರಾಧವಾಗಿದೆ. ಖಾಸಗಿ ವಿಚಾರವನ್ನು ಬೀದಿಗೆ ತರುತ್ತಿದ್ದಾರೆ. ಮೀಡಿಯಾ ಮುಂದೆ ಬಂದು ಈ ರೀತಿ ವರ್ತಿಸುತ್ತಿದ್ದಾರೆ.
ಇವರಿಂದ ಒಳ್ಳೆಯ ಅಧಿಕಾರಿಗಳಿಗೆ ಅವಮಾನವಾಗುತ್ತದೆ. ಇಬ್ಬರ ನಡವಳಿಕೆ ನೋಡ್ತಾ ಇದ್ರೆ ಭಯವಾಗುತ್ತೆ. ಈ ಬಗ್ಗೆ ಡಿಜಿ, ಮುಖ್ಯಮಂತ್ರಿ ಬಳಿ ಮಾತನಾಡಿದ್ದೇನೆ. ಈ ರೀತಿ ಮಾತನಾಡುವುದು ತಪ್ಪು. ಈಗ ನಾನು ಮಾತನಾಡಲ್ಲ. ಮುಖ್ಯಮಂತ್ರಿಗೆ ಎಲ್ಲಾ ಗೊತ್ತು. ಅವರು ಖಂಡಿತ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.