ಸುದ್ದಿಒನ್, ಚಿತ್ರದುರ್ಗ, ಸೆ.01 : ಭಾರತದ ಚೊಚ್ಚಲ ಸೂರ್ಯಯಾನ ಮಿಷನ್ ಆದಿತ್ಯ ಎಲ್-1 ಯಶಸ್ವಿ ಉಡಾವಣೆಯಾಗಿರುವ ಹಿನ್ನೆಲೆ ಕ.ರಾ.ವಿ.ಪ.ರಾಜ್ಯ ಸಮಿತಿ ಸದಸ್ಯ ಎಚ್.ಎಸ್.ಟಿ.ಸ್ವಾಮಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸೂರ್ಯಯಾನ ಮಿಷನ್ ಆದಿತ್ಯ ಎಲ್-1 ಯಶಸ್ವಿ ಉಡಾವಣೆ : ಎಚ್.ಎಸ್.ಟಿ.ಸ್ವಾಮಿ ಅಭಿನಂದನೆ pic.twitter.com/WwsM8fPkWJ
— suddione-kannada News (@suddione) September 2, 2023
ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದ ಸೂರ್ಯನನ್ನು ಅದರ ಅತ್ಯಂತ ಹೊರ ವಲಯ ಕರೋನ, ಸೌರಜ್ವಾಲೆ, ಸೂರ್ಯನ ವಾತಾವರಣ, ಸೂರ್ಯನ ತಾಪ, ಸೂರ್ಯನ ಕಿರಣಗಳ ಬಗ್ಗೆ ಅಧ್ಯಯನ ನಡೆಸಿ ನಿಖರವಾದ ಮಾಹಿತಿಯನ್ನು ಪಡೆದು ಭೂಮಿಗೆ ಕಳುಹಿಸಲಿದೆ.
ಈ ಯೋಜನೆಯನ್ನು ಯಶಸ್ವಿ ಗೊಳಿಸಿದ ಇಸ್ರೋ ವಿಜ್ಞಾನಿಗಳಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಚಿತ್ರದುರ್ಗ ಜಿಲ್ಲೆಯ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.