14 ತಿಂಗಳ ಮಗುವಿಗೆ ಯಶಸ್ವಿ ಹೃದಯ ಕಸಿ : ಬೆಂಗಳೂರಿನಲ್ಲಿ ವೈದ್ಯರ ಅಪರೂಪದ ಸಾಧನೆ..!

suddionenews
1 Min Read

ಬೆಂಗಳೂರು : ಇಲ್ಲಿನ ನಾರಾಯಣ ಹೃದಯಾಲಯದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿಗೆ ನಾರಾಯಣ ಆಸ್ಪತ್ರೆ ವೈದ್ಯರು ಹೃದಯ ಕಸಿ ಚಿಕಿತ್ಸೆ ಯಶಸ್ವಿಯಾಗಿ ನಡೆಸಿದ್ದಾರೆ. ಈ ಕುರಿತು ಶಶಿರಾಜ್ ಈ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ವಿವರವನ್ನು ಗುರುವಾರ ಮಾಧ್ಯಮಗಳಿಗೆ ತಿಳಿಸಿದರು. ಆದರೆ ಆಗಸ್ಟ್ 18 ರಂದು ಈ ಆಪರೇಷನ್ ಮಾಡಲಾಗಿದ್ದು, ಈಗ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

ಎರಡೂವರೆ ವರ್ಷದ ಮಗು ನರಸಂಬಂಧಿ ಕಾಯಿಲೆಯಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾಗ, ಮಗುವಿನ ಕುಟುಂಬಸ್ಥರು ಮಾನವೀಯತೆಯನ್ನು ಮೆರೆದಿದ್ದಾರೆ. ಕುಟುಂಬದವರಿಗೆ ಆಸ್ಪತ್ರೆಯ ವೈದ್ಯರು ಮಗುವಿನ ಸ್ಥಿತಿಯನ್ನು ಮನವರಿಕೆ ಮಾಡಿದರು. ಆಗ ಅವರು ಮನಃಪೂರ್ವಕವಾಗಿ ತಮ್ಮ ಮಗುವಿನ ಹೃದಯವನ್ನು ದಾನ ಮಾಡಲು ಒಪ್ಪಿಕೊಂಡರು. ಇತ್ತೀಚೆಗೆ ಆಗಸ್ಟ್ 18ರಂದು ಡಾ.ಸುದೇಶ್ ಪ್ರಭು ನೇತೃತ್ವದಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಸದ್ಯ ಆ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಶಶಿರಾಜ್ ತಿಳಿಸಿದ್ದಾರೆ.

ಹತ್ತು ತಿಂಗಳ ಮಗುವಿಗೆ ಹೃದಯದ ಸಮಸ್ಯೆ ಇರುವುದನ್ನು ವೈದ್ಯರು ಪತ್ತೆ ಹಚ್ಚಿದರು. ಅದೇ ಮಗುವಿಗೆ ಸತತವಾಗಿ ನಾಲ್ಕು ತಿಂಗಳ ಕಾಲ ಚಿಕಿತ್ಸೆಗಳು ಮುಂದುವರೆಸಿದರು. ಆದರೆ ಹೃದಯ ಕಸಿ ಅಗತ್ಯವಿತ್ತು. ಇದೇ ವೇಳೆ ಆಸ್ಪತ್ರೆಯಲ್ಲಿ ಎರಡೂವರೆ ವರ್ಷದ ಮಗು ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅದೇ ಮಗುವಿನ ಹೃದಯವನ್ನು 14 ತಿಂಗಳ ಮಗುವಿಗೆ ಸೂಕ್ತ ದಾನಿ ಲಭ್ಯವಿದ್ದ ಕಾರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿತು ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಮಗುವಿನ ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *