ಚಿತ್ರದುರ್ಗ, (ಏ.03) : ಶ್ರೀ ಹರಿ ಎಜುಕೇಶನ್ ಟ್ರಸ್ಟ್, ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ತರಗತಿ CBSE ಮಕ್ಕಳಿಗೆ ಗಣಿತ ವಿಷಯದ ಉಚಿತ ಕಾರ್ಯಗಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ನಗರದ ಹೊರವಲಯದ ಶ್ರೀ ಯಾದವಾನಂದ ಮಠದ ಆವರಣದಲ್ಲಿರುವ ಕಾಲೇಜಿನಲ್ಲಿ ಈ ಕಾರ್ಯಾಗಾರವನ್ನು ಟ್ರಸ್ಟ್ ಸಂಸ್ಥಾಪಕರಾದ ಮಂಜುನಾಥ ಶೆಟ್ಟಿಯವರು ರವರು ಉದ್ಘಾಟನೆ ಮಾಡಿದರು.
ಈ ಕಾರ್ಯಾಗಾರದಲ್ಲಿ 10 ನೇ ತರಗತಿ CBSE ಯಲ್ಲಿ ಓದುತ್ತಿರುವ 100 ಕ್ಕಿಂತ ಹೆಚ್ಚು ಮಕ್ಕಳು ಚಿತ್ರದುರ್ಗ, ಹಿರಿಯೂರು, ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿದ್ದರು.
ಈ ವೇಳೆ ಕಾರ್ಯದರ್ಶಿ ಮಧು.ಎಸ್.ಎಮ್, ಪ್ರಾಚಾರ್ಯ ದಕ್ಷಿಣಾಮೂರ್ತಿ ಎಸ್.ಎನ್, ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಗಣಿತ ಉಪನ್ಯಾಸಕರಾದ ಮಹೇಶ್ ಆರಾಧ್ಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕನ್ನಡ ಉಪನ್ಯಾಸಕರಾದ ಶ್ರೀಮತಿ ಶಿಲ್ಪ ನಿರೂಪಿಸಿದರು.
ಈ ಕಾರ್ಯಗಾರದಲ್ಲಿ SJMR (CBSE) ಶಾಲೆಯ ಭಾನುಪ್ರಿಯ ಹೆಚ್, ಹಾಗೂ ಅನುಪಮ ಹರುಷ ವ್ಯಕ್ತಪಡಿಸಿದರು.