ಯಶಸ್ವಿಯಾಗಿ ಒಂದು ತಿಂಗಳು ಪೂರೈಸಿದ ಕಾಂಗ್ರೆಸ್ ಜೋಡೋ ಯಾತ್ರೆ

 

ತುಮಕೂರು: ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬರೋಬ್ಬರಿ ಒಂದು ತಿಂಗಳು ತುಂಬಿದೆ. ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ತುಮಕೂರಿನಲ್ಲಿ ಸಾಗುತ್ತಿದೆ. ಇಲ್ಲಿವರೆಗೂ 700 ಕಿಲೋ ಮೀಟರ್ ಗಳಷ್ಟು ಪಾದಯಾತ್ರೆಯಲ್ಲಿ ನಡೆದಿದ್ದಾರೆ.

 

ನಿನ್ನೆಯಿಂದ ತುಮಕೂರಿಗೆ ಪ್ರವೇಶ ಪಡೆದ ಯಾತ್ರೆಯಲ್ಲಿ ಸ್ಥಳೀಯ ಶಾಸಕರು ಭಾಗವಹಿಸಿದ್ದಾರೆ. ಇಂದು ರಾಹುಲ್ ಗಾಂಧಿ ಜೊತೆಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಾಜಿ ಸಚಿವ ಟಿ ಬಿ ಜಯಚಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಸೆಪ್ಟೆಂಬರ್7 ರಂದು ಆರಂಭವಾದ ಈ ಯಾತ್ರೆ 32 ದಿನಗಳನ್ನು ಸಾಗಿದೆ. ಯಾತ್ರೆ ವೇಳೆ ಹಲವು ಸುಂದರ ದೃಶ್ಯಗಳು ವೈರಲ್ ಆಗುತ್ತಿವೆ. ಯಾತ್ರೆ ವೇಳೆ ಸಿಕ್ಕ ಸ್ಥಳೀಯ ಜನರನ್ನು ರಾಹುಲ್ ಗಾಂಧಿ, ಮನಸ್ಸಾರೆ ಪ್ರೀತಿಸಿದ್ದಾರೆ, ಮಾತನಾಡಿಸಿದ್ದಾರೆ. ಆ ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ.

Share This Article
Leave a Comment

Leave a Reply

Your email address will not be published. Required fields are marked *