ಚಿತ್ರದುರ್ಗ, (ಫೆ.09) : ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಡಿಸಿಕೊಳ್ಳುವುದರಿಂದ ಉನ್ನತ ಶಿಕ್ಷಣ ಪಡೆಯುವ ಜೊತೆಗೆ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು ಜಿ ಆರ್ ಜೆ ಹೇಳಿದರು.
ನಗರದ ಶಿಕ್ಷಣ ಸಂಸ್ಥೆಯಾದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಸಿ.ಬಿ.ಎಸ್.ಇ. 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ 10 ವರ್ಷ ಕಷ್ಟಪಟ್ಟರೆ ಇಡೀ ಜೀವನ ಸುಖಮಯವಾಗಿರುತ್ತದೆ. ಪೌರಾಣಿಕ ಆದರಿಸಿದ ವಶಿಷ್ಠ ಮಹರ್ಷಿಗಳ ಕಥೆ ಹೇಳುವುದರೊಂದಿಗೆ ಕ್ರಮಬದ್ಧ ಅಭ್ಯಾಸ ಜೊತೆ ಜೊತೆ ಶಿಸ್ತುಬದ್ಧವಾದ ಜೀವನ ನಡೆಸಬೇಕು. ವಿದ್ಯಾರ್ಥಿಯು ಹೆಚ್ಚು ಅಂಕ ಪಡೆದು ಸಂಸ್ಕಾರ, ಮಾನವೀಯತೆ ಮರೆತರೆ ಅದು ವ್ಯರ್ಥ ಮೊದಲು ಮಾನವಗುಣವನ್ನು ಪಡೆದು ಮನುಷ್ಯರಾಗಿ ಬಾಳಬೇಕು ಎಂದರು.
ತೇಜಸ್ವಿ ಹೆಚ್. ಟಿ. ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಜೀವನ ಅನುಭವದ ನುಡಿಮುತ್ತು ಹೇಳುವುದರೊಂದಿಗೆ ಮಕ್ಕಳಿಗೆ ಸ್ಪೂರ್ತಿಧಾಯಕ ಮಾತುಗಳು ಮತ್ತು ವಿದ್ಯಾರ್ಥಿ ಜೀವನದ ಗುರಿ ಮತ್ತು ಜವಬ್ಧಾರಿ ಕುರಿತು ತಮ್ಮ ಅನುಭವದ ನುಡಿಮುತ್ತುಗಳನ್ನು ತಿಳಿಸಿದರು.
ಎಸ್ ಆರ್ ಎಸ್ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಬಿ ಎ ಲಿಂಗಾರೆಡ್ಡಿ ಮಾತನಾಡಿ, ವಿದ್ಯಾರ್ಥಿ ಜೀವನ ಹೇಗಿರಬೇಕೆಂದು ಹಾಗೂ ಸಮಾಜದಲ್ಲಿ ತಮ್ಮನ್ನು ತಾವು ಹೇಗೆ ಗುರುತಿಸಿಕೊಳ್ಳಬೇಕೆನ್ನುವುದರ ಜೊತೆ ಪೋಷಕರ ಕರ್ತವ್ಯ ಕುರಿತು ಮಾತನಾಡಿದರು. ಹಾಗೂ ವಿದ್ಯಾರ್ಥಿಗಳ ಮುಂದಿನ ಪರೀಕ್ಷೆಗೆ ಶುಭಹಾರೈಸಿದರು.
ಕಾರ್ಯಕ್ರಮಕ್ಕೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಾಕ್ಷರು ಅಮೋಘ್ ಬಿ. ಎಲ್. ಡಾ|| ರವಿ ಟಿ.ಎಸ್. ಸಂಸ್ಥೆಯ ಆಡಳಿತಾಧಿಕಾರಿಗಳು, ಪ್ರಭಾಕರ್‍ಎಂ. ಎಸ್ ಪ್ರಾಂಶುಪಾಲರು ಹಾಗೂ ಶಾಲೆಯ ಶೈಕ್ಷಣಿಕ ಸಂಯೋಜಕರು, ರಾಕೇಶ್ ಬಿ. ವಿ.
ಬೋಧಕವರ್ಗ, ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸುವುದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ತುಂಬು ಹೃದಯದಿಂದ ಶುಭಕೋರಿದರು.