ಇಚ್ಛಾಶಕ್ತಿ ಮತ್ತು ಧನಾತ್ಮಕ ಆಲೋಚನೆಗಳು ಇದ್ದರೆ ಮಾತ್ರ ಉದ್ಯೋಗದಲ್ಲಿ ಯಶಸ್ವಿ ಸಾಧ್ಯ : ಶ್ರೀಮತಿ ಟಿ.ಆರ್. ಶಶಿಕಲಾ

2 Min Read

 

ಸುದ್ದಿಒನ್, ಚಿತ್ರದುರ್ಗ, (ಜೂ.16) : ಮನಸ್ಸಿದರೆ ಮಾರ್ಗ ಎನ್ನುವಂತೆ  ಯಾವುದೇ ಕೆಲಸವನ್ನು ಮಾಡಬೇಕಾದರೆ ಇಚ್ಛಾಶಕ್ತಿಯೊಂದಿಗೆ ಧನಾತ್ಮಕ ಆಲೋಚನೆಗಳು ಇದ್ದರೆ ಮಾತ್ರ ಉದ್ಯೋಗದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ಉಪ ನಿರ್ದೇಶಕಿ ಶ್ರೀಮತಿ ಟಿ.ಆರ್. ಶಶಿಕಲಾ ಹೇಳಿದರು.

ರುಡ್‌ಸೆಟ್ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉದ್ಯಮಶೀಲತಾಭಿವೃದ್ಧಿ – ವಸ್ತ್ರ ಚಿತ್ರಕಲಾ ಉದ್ಯಮಿ  (ಎಂಬ್ರಾಯಿಡರಿ ಮತ್ತು ಪೆಬ್ರಿಕ್ ಪೇಟಿಂಗ್) ಒಂದು ತಿಂಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಎಂಬ್ರಾಯಿಡರಿ ಮತ್ತು ಪೆಬ್ರಿಕ್ ಪೇಟಿಂಗ್ ಮಾಡುವುದು ಉತ್ತಮ ಆದಾಯತರುವಂತಹ ಬೇಡಿಕೆಯುತ ಉದ್ಯಮವಾಗಿದೆ. ಈ ಉದ್ಯಮದಲ್ಲಿ ಸಮಯಪಾಲನೆ ಮತ್ತು ಬದ್ಧತೆಯೊಂದಿಗೆ ಕೆಲಸ ಅತ್ಯಂತ ಅವಶ್ಯಕವಾಗಿದೆ. ಆಧುನಿಕ ಜೀವನ ಶೈಲಿಗನುಗುಣವಾಗಿ ನಿಮ್ಮ ಉದ್ಯಮದಲ್ಲಿ ಹೊಸಹೊಸ ವಿನ್ಯಾಸಗಳನ್ನು ಅಳವಡಿಸಿಕೊಳ್ಳುತ್ತಾಸಾಗಬೇಕು.

ಹೊಸದು ನಿರಂತರ ಪ್ರಕ್ರಿಯೆಯಾದಾಗ ನೂತನ ಬದಲಾವಣೆಗೆ ನಾಂದಿಯಾಗುತ್ತದೆ. ಅಂದರೆ ಮಾತ್ರ ತಾಂತ್ರಿಕವಾಗಿ ಬದಲಾಗುತ್ತಿರುವ ಉದ್ಯಮದಲ್ಲಿ ಮುಂದುವರಿಯಲು ಸಾದ್ಯವಾಗುತ್ತದೆ. ಒಂದಿಷ್ಟು ನಗು, ಸಹನೆ ಮತ್ತು ಹೊಂದಾಣಿಕೆಯಿಂದ ವೃತ್ತಿ ಬದುಕನ್ನು ಸಧೃಡವಾಗಿ ಕಟ್ಟಿಕೊಳ್ಳಿರಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಸಕಾರಾತ್ಮಕ ಮನೋಭಾವದೊಂದಿಗಿನ ಕೆಲಸ ಮತ್ತು ನಗು ಮುಖದ ಸೇವೆ ಇವು ಯಶಸ್ವಿ ಉದ್ಯೋಗಿಗಳ ಗುಟ್ಟು ಎಂದು ತಿಳಿಸುತ್ತಾ ಮಾಡುವ ವೃತ್ತಿಯನ್ನು ಪ್ರೀತಿಯಿಂದ ಹಾಗೂ ಶ್ರದ್ಧೆಯಿಂದ ಮಾಡಿ  ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ರಾಧಮ್ಮ ಎಚ್.ಆರ್ ಮಾತನಾಡಿ, ತರಬೇತಿಯ ಅವಧಿಯಲ್ಲಿ ಕಲಿಸಲಾಗಿರುವ ಮೃದು ಕೌಶಲ್ಯಗಳು ಉದ್ಯಮಶೀಲತ ಗುಣಗಳು, ಸಂವಹನ ಕಲೆ, ಸಮಯಪಾಲನೆ, ಮಾರುಕಟ್ಟೆಯ ವಿಷಯಗಳ ಕುರಿತಂತೆ ತಿಳಿದುಕೊಂಡಿರುವ ಅಂಶಗಳನ್ನು ಉದ್ಯೋಗದ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಸಲಹೆ ನೀಡಿದರು.

ತರಬೇತಿಯ ನಂತರವು ಸಂಸ್ಥೆಯಿಂದ ನಿಮ್ಮನ್ನು ಎರಡು ವರ್ಷಗಳ ಕಾಲ ಅವಲೋಕನ ಮಾಡಲಾಗುತ್ತದೆ, ನಿಮ್ಮ ಉದ್ಯೋಗದ ಆಗುಹೋಗುಗಳ ಬಗ್ಗೆ ವಿಚಾರಿಸುತ್ತಾ ಉದ್ಯಮ ಕಟ್ಟುವ ಪ್ರಕ್ರಿಯೆಯಲ್ಲಿ ಸಂಸ್ಥೆ ನಿಮ್ಮೊಂದಿಗಿರುತ್ತದೆ  ಎಂದು ಭರವಸೆ ನೀಡಿದರು.

ಸಂಸ್ಥೆಯ ಉಪನ್ಯಾಸಕರಾದ ತೋಟಪ್ಪ ಎಸ್. ಗಾಣಿಗೇರ ರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಉದಯಕುಮಾರ, ಹಿರಿಯ ಉಪನ್ಯಾಸಕರು ಇವರು ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಶ್ರೀಮತಿ ಶೋಭಾ, ಉಪಸ್ಥಿತರಿದ್ದರು. ಒಟ್ಟು ಕಾರ್ಯಕ್ರಮದಲ್ಲಿ 35 ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *