ನ್ಯೂಯಾರ್ಕ್: ನಾವು ಬೆಳಿಗ್ಗೆ ಎದ್ದಾಗಿನಿಂದ ಮಲಗುವ ತನಕ ಬಳಸುವ ಎಲ್ಲಾ ಪ್ಲಾಸ್ಟಿಕ್ ಸಾಧನಗಳಲ್ಲಿ ಥಾಲೇಟ್ ಒಂದು ರಾಸಾಯನಿಕ ಇದೆ ಎಂದು ನ್ಯೂಯಾರ್ಕ್ ಸಂಶೋಧಕರು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ.
ಮಕ್ಕಳ ಆಟಿಕೆಗಳಿಂದ ಹಿಡಿದು ನಾವು ಪ್ರತಿದಿನ ಬಳಸುವ ಶ್ಯಾಂಪೂಗಳು, ಮೇಕಪ್ ಕಿಟ್ ಹೀಗೆ ಎಲ್ಲವೂ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದ್ದು ಇದರಲ್ಲಿ ಥಾಲೇಟ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ಮೂಲವಾಗಿದೆ.
ಇದು ಹಾರ್ಮೋನುಗಳ ವ್ಯವಸ್ಥೆಯನ್ನು ನಾಶಪಡಿಸುವ ಅಂಶವೆಂದು ತಿಳಿದುಬಂದಿದೆ. ಮತ್ತು ಇದು ಸಂಪೂರ್ಣ ಮಾನವ ಪಿಟ್ಯುಟರಿ ಗ್ರಂಥಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಪ್ಲಾಸ್ಟಿಕ್ ವಸ್ತುಗಳು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ ಮತ್ತು ಆದ್ದರಿಂದ ಈ ವಿಷಕಾರಿ ರಾಸಾಯನಿಕಗಳು ಸುಲಭವಾಗಿ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಇದು ಮಧುಮೇಹ, ಬೊಜ್ಜು ಮತ್ತು ಹೃದ್ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ.
ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಗ್ರಾಸ್ಮನ್ ಸ್ಕೂಲ್ ಆಫ್ ಮೆಡಿಸಿನ್ ಅಧ್ಯಯನವು 55 ರಿಂದ 64 ವರ್ಷದೊಳಗಿನ 5,000 ಜನರು ತಮ್ಮ ಮೂತ್ರದಲ್ಲಿ ಥಾಲೇಟ್ ಸಾಂದ್ರತೆಯನ್ನು ಹೊಂದಿರುವುದನ್ನು ಕಂಡುಹಿಡಿದಿದೆ. ಅವರು ಹೃದಯ ಕಾಯಿಲೆಯಿಂದ ಸಾಯುವ ಸಾಧ್ಯತೆ ಹೆಚ್ಚು.
ಹೃದ್ರೋಗಕ್ಕೆ ರಾಸಾಯನಿಕಗಳು ಮುಖ್ಯ ಕಾರಣವೆಂದು ಹೇಳಲಾಗುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗಲು ರಾಸಾಯನಿಕ ಥಾಲೇಟ್ಸ್ ಕೂಡ ಕಾರಣ ಎಂದು ಹೇಳಲಾಗಿದೆ.
ನ್ಯೂಯಾರ್ಕ್‌ನ ಸಂಶೋಧಕರ ಪ್ರಕಾರ, ಪ್ರತಿವರ್ಷ 100,000 ಅಮೆರಿಕನ್ನರು ಥಾಲೇಟ್ ರಾಸಾಯನಿಕದಿಂದ ಉಂಟಾಗುವ ವಿವಿಧ ರೋಗಗಳಿಂದ ಸಾಯುತ್ತಿದ್ದಾರೆಂದು ತಿಳಿದು ಬಂದಿದೆ. ಇದರಿಂದಾಗಿ 40 ರಿಂದ 47 ಬಿಲಿಯನ್ ಡಾಲರ್ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.