ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಡಿ.07): ಶಿಕ್ಷಣ ಹಂತದಲ್ಲಿಯೇ ಯುವ ಸಮೂಹಕ್ಕೆ ರಂಗಕಲೆ, ನಾಟಕ, ಸಂಸ್ಕೃತಿಯ ಪರಿಚಯವಾಗಬೇಕೆಂದು ಎಸ್.ಜೆ.ಎಂ. ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮಂಜುಳ ತಿಳಿಸಿದರು.

ರಂಗ ಭಂಡಾರ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಬಿ.ಸಿ.ಎಂ.ಬಾಲಕಿಯರ ವಸತಿ ನಿಲಯದಲ್ಲಿ ಮಹಿಳಾ ಸಾಂಸ್ಕøತಿಕ ಉತ್ಸವ-2022 ಸಮೂಹ ನೃತ್ಯ, ಸಮೂಹ ಗಾಯನ, ರೂಪಕ ಪ್ರದರ್ಶನ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬೇಕು. ನಾಟಕ, ಕಲಾರಂಗ ಮತ್ತು ರಂಗಭೂಮಿಯಲ್ಲಿ ಸೇವೆ ಮಾಡಲು ಇಂದಿನ ಯುವ ಪೀಳಿಗೆಗೆ ರಂಗ ಸಂಸ್ಥೆಗಳು ಮತ್ತು ರಂಗಶಿಕ್ಷಣ ಕೇಂದ್ರಗಳು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬರುತ್ತಿವೆ. ಕಲೆಯನ್ನು ಅಭಿವ್ಯಕ್ತಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ನಾಟಕ, ನೃತ್ಯ ಜೀವನದ ಒಂದು ಭಾಗವಾಗಿರಬೇಕು. ಪ್ರಾದೇಶಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪರಿಚಯಿಸುವುದರಿಂದ ಆ ಮಣ್ಣಿನ ಮಹತ್ವ ತಿಳಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಶ್ರೀಮತಿ ಶ್ವೇತಾ ಮಾತನಾಡಿ ದೊಡ್ಡಾಟ, ಬಯಲಾಟ ಮುಂತಾದ ನಾಟಕ ಪ್ರಕಾರಗಳಲ್ಲಿ ಯುವ ಜನಾಂಗ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಶ್ರೀಮತಿ ಸುನಿತಾ, ಮಹಿಳಾ ವಸತಿ ನಿಲಯದ ಮೇಲ್ವಿಚಾರಕಿ ಶ್ರೀಮತಿ ಜಾಹಿದ, ಉಪನ್ಯಾಸಕಿ ಡಾ.ಶಕೀಲ, ನ್ಯಾಯವಾದಿ ಶ್ರೀಮತಿ ಶ್ವೇತಾ ಕೀರ್ತಿ, ರಂಗ ಭಂಡಾರ ಕಲಾ ಸಂಘದ ಅಧ್ಯಕ್ಷೆ ಶ್ರೀಮತಿ ನಿರ್ಮಲ ವೇದಿಕೆಯಲ್ಲಿದ್ದರು.


