ಬೆಂಗಳೂರು; ತಾವಿರುವ ಜಾಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತೆ ಅಂದ್ರೆ ಎಂಥವರಿಗೆ ಆಗಲಿ ಭೀತಿ ಶುರುವಾಗದೆ ಇರುತ್ತಾ..? ಪೆಹಲ್ಗಾಮ್ ನಲ್ಲಿ ನಡೆದ ಅಟ್ಯಾಕ್ ಬಳಿಕ ದೇಶದಲ್ಲಿ ಏನೆಲ್ಲಾ ಆಗ್ತಾ ಇದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಪಾಪಿ ಪಾಕಿಸ್ತಾನದ ಮೇಲೆ ನಮ್ಮ ಭಾರತೀಯ ಸೇನೆ ಯುದ್ಧ ಸಾರಿದೆ. ಗತಿ ಇಲ್ಲದ ದೇಶದ ಸ್ಥಿತಿ ಕಂಡು ಹೋಗ್ಲಿ ಪಾಪ ಅಂತ ಕದನ ವಿರಾಮಕ್ಕೆ ಗ್ರೀನ್ ಸಿಗ್ನಲ್ ಕೊಟ್ರೆ ಮತ್ತೆ ಮತ್ತೆ ತನ್ನ ಕೊಳಕು ಬುದ್ದಿಯನ್ನ ಪಾಕ್ ಸೇನೆ ತೋರಿಸಿದೆ. ಮೋದಿಯವರು ಕೂಡ ಯುದ್ಧ ಮುಂದುವರೆಸುತ್ತೇವೆ ಎಂದಿದ್ದಾರೆ. ಇದರ ನಡುವೆ ಕಾಶ್ಮೀರಕ್ಕೆ ಓದುವುದಕ್ಕೆಂದು ಹೋದಂತ ಕರ್ನಾಟಕದವರು ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ.
ದಾಳಿ ನಡೆದಾಗಲೇ ಒಂದಷ್ಟು ಜನರನ್ನು ಸರ್ಕಾರ ಸುರಕ್ಷಿತವಾಗಿ ಕರೆತಂದಿತ್ತು. ಆದರೆ ಇನಗನು ಹಲವರು ಅಲ್ಲಿಯೇ ಉಳಿದುಕೊಂಡಿದ್ದರು. ಈಗ ಅವರನ್ನು ಕೂಡ ಸುರಜ್ಷಿತವಾಗಿ ಕರೆತರಲಾಗಿದೆ. ಪೆಹಲ್ಗಾಮ್ ಅಟ್ಯಾಕ್ ಆದ ದಿನದಿಂದಲೂ ಆತಂಕದಲ್ಲಿಯೇ ಇದ್ದ ವಿದ್ಯಾರ್ಥಿಗಳು ಇಂದು ರಾಜ್ಯಕ್ಕೆ ಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟು 13 ಮಂದಿ ವಿದ್ಯಾರ್ಥಿಗಳು ವಾಪಾಸ್ ಆಗಿದ್ದಾರೆ.
ಓದಲು ಹೋಗಿದ್ದ ವಿದ್ಯಾರ್ಥಿಗಳಲ್ಲಿ ಹರ್ಷಿತ್ ಪೋಷಕರು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡಿದ್ದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಗನ ಪರಿಸ್ಥಿತಿ ವಿವರಿಸಿದ್ದರು. ಆತನನ್ನು ಕರೆತರುವಂತೆ ಮನವಿ ಮಾಡಿದ್ದರು. ಕಡೆಗೂ ಹರ್ಷಿತ್ ಸೇರಿದಂತೆ ಹದಿಮೂರು ಮಂದಿ ವಾಪಾಸ್ ಆಗಿದ್ದಾರೆ. ಅಲ್ಲಿನ ಅನುಭವ ತೆರೆದಿಟ್ಟ ಹರ್ಷಿತ್, ನಮಗೆ ಅಲ್ಲಿ ಓಡಾಡೋದಕ್ಕೂ ಭಯ ಆಗ್ತಾ ಇತ್ತು. ಹಾಸ್ಟೇಲ್ ನಲ್ಲಿ ಲೈಟ್ ಆಫ್ ಮಾಡಿ, ವಿಂಡೋ ಕ್ಲೋಸ್ ಮಾಡಿ ಇರಲು ಹೇಳ್ತಾ ಇದ್ರು. ಆತಂಕದಲ್ಲಿ ನಿದ್ದೆಯೂ ಬರ್ತಾ ಇರಲಿಲ್ಲ. ವಾಪಾಸ್ ಬರೋಣಾ ಅಂದ್ರೆ ವ್ಯವಸ್ಥೆಯು ಇರಲಿಲ್ಲ ಎಂದು ಹೇಳಿದ್ದಾರೆ.
