ಚಿತ್ರದುರ್ಗ, (ಜ.20) : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು 30ನೇ ರಾಜ್ಯ ಮಟ್ಟದ “ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು” ಜನವರಿ 16, 17, 18ರಂದು ಕಲ್ಬುರ್ಗಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ವಿಷಯ ಮಂಡಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ರಾಜ್ಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ಶಾಲೆಯ ಟಿ.ಎಸ್.ಸುಶೃತ್ ಮತ್ತು ಪಿ.ಆದಿತ್ಯ “ತ್ಯಾಜ್ಯ ವಿಲೇವಾರಿ ಹಾಗೂ ಆರೋಗ್ಯದ ಪರಿಣಾಮ” ಎಂಬ ಶೀರ್ಷಿಕೆ ಅಡಿ ತಮ್ಮ ಯೋಜನೆಯನ್ನು ಮಂಡಿಸಿ ಇದೇ ತಿಂಗಳ ಜನವರಿ 27 ರಿಂದ 31 ರವರೆಗೆ ಗುಜರಾತಿನ ಅಹಮದಾಬಾದ್‍ನಲ್ಲಿ ನಡೆಯುವ ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿರುತ್ತಾರೆ.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಚಿತ್ರದುರ್ಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಹಾಗೂ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳ ಅದ್ಬುತ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಬಿ.ವಿಜಯ್ ಕುಮಾರ್, ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಪೃಥ್ವೀಶ್ ಎಸ್.ಎಂ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ|| ಸ್ವಾಮಿ.ಕೆ.ಎನ್ ಮತ್ತು ಮುಖ್ಯೋಪಾಧ್ಯಾಯರಾದ ಶ್ರೀ ಸಿ.ಡಿ ಸಂಪತ್ ಕುಮಾರ್, ಐಸಿಎಸ್‍ಇ ಪ್ರಾಂಶುಪಾಲರಾದ ಶ್ರೀ ಬಸವರಾಜಯ್ಯ.ಪಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಖಜಾಂಚಿಗಳಾದ ಹೆಚ್.ಎಸ್.ಟಿ ಸ್ವಾಮಿರವರು ಮತ್ತು ಮಾರ್ಗದರ್ಶಿ ಶಿಕ್ಷಕಿಯಾದ ಆಶಾ.ಸಿ.ಹೆಚ್.ಎಂ ಹಾಗೂ ಸಂಸ್ಥೆಯ ಬೋಧಕ / ಬೋಧಕೇತರ ವರ್ಗದವರು ಅಭಿನಂದಿಸಿರುತ್ತಾರೆ.