Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ: ಶಿಕ್ಷಣ ಸಂಸ್ಥೆಯಾದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ಸಿಬಿಎಸ್‍ಇ ಕ್ಲಸ್ಟರ್ ವಿಭಾಗದ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಕೆಲ ಸ್ಥಾನ ಪಡೆದುಕೊಂಡು ಮತ್ತು ರಾಷ್ಟ್ರಮಟ್ಟದ ಆಯ್ಕೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

1.ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆ ಆಯೋಜಿಸಿದ್ದ ಸೌತ್ ಜ್ಹೋನ್ ಸೆಕೆಂಡ್ ಚೆಸ್ ಪಂದ್ಯಾವಳಿಯು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯ ಶಾಲೆಗಳು ಭಾಗವಹಿಸಿದ್ದು ಸೆಮಿಫೈನಲ್ ಅಂತಿಮ ಸುತ್ತಿನಲ್ಲಿ 33 ಶಾಲೆಗಳ ಪಟ್ಟಿಯಲ್ಲಿ ನಮ್ಮ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೂ ಡಿಸೆಂಬರ್ 22, 23ರಂದು ಉತ್ತರಪ್ರದೇಶದ ನೋಯ್ಡದಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.

ವಿದ್ಯಾರ್ಥಿನಿಯರು ತರಗತಿ ಸ್ಫರ್ಧೆ ಸೆಮಿಫೈನಲ್‍ನಲ್ಲಿ ಪಡೆದಸ್ಥಾನ
ನೋಮಿಕ ಆರ್ 4 ನೇ ತರಗತಿ ಚೆಸ್ ದ್ವಿತೀಯ  ಸ್ಥಾನ
ಮಧುಲೇಖ ಜಿ .4 ನೇ ತರಗತಿ ಚೆಸ್ ದ್ವಿತೀಯ  ಸ್ಥಾನ
ಎಸ್ ಆರ್ ಅಪೇಕ್ಷ 6 ನೇ ತರಗತಿ ಚೆಸ್ ದ್ವಿತೀಯ  ಸ್ಥಾನ
ಹಾಸಿನಿ ಅಜಿತ್ 8 ನೇ ತರಗತಿ ಚೆಸ್ ದ್ವಿತೀಯ ಸ್ಥಾನ

“ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಿಬಿಎಸ್‍ಇ ಶಾಲೆ” ದಾವಣಗೆರೆಯ ಸಿಬಿಎಸ್‍ಇ ಅಥ್ಲೇಟಿಕ್ಸ್ ಸ್ಫರ್ಧೆಗಳನ್ನು ಆಯೋಜಿಸಿದ್ದು ನಮ್ಮ ಶಾಲೆಯ ವಿದ್ಯಾರ್ಥಿಗಳು ಸೆಮಿಫೈನಲ್‍ನಲ್ಲಿ ಕೆಲ ಸ್ಥಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.

ವಿದ್ಯಾರ್ಥಿ ತರಗತಿ ಸ್ಫರ್ಧೆ ಪಡೆದಸ್ಥಾನ
ವೈಷ್ಣವಿ ಎಮ್ ಕುಂಬಾರ್, 9 ನೇ ತರಗತಿ 100 ಮತ್ತು 200 ಮೀಟರ್ ಓಟ ಸೆಮಿ ಫೈನಲ್ ದ್ವಿತೀಯ ಸ್ಥಾನ
ಸಿದ್ಧಾರ್ಥ್ ಈ ಟಿ 8 ನೇ ತರಗತಿ 200 ಮೀಟರ್ ಓಟ ಸೆಮಿಫೈನಲ್ ದ್ವಿತೀಯ ಸ್ಥಾನ
ಗಗನ್ ದೀಪ್ ಎ10 ನೇ ತರಗತಿ ಎತ್ತರ ಜಿಗಿತನಾಲ್ಕನೇ ಸ್ಥಾನ

ಯುವಜನ ಕ್ರೀಡಾ ಇಲಾಖೆ ಮತ್ತು ಸಬಲೀಕರಣ” ಆಯೋಜಿಸಿದ್ದ ಶಿಕ್ಷಣ ಕರ್ನಾಟಕ ಸ್ಟೇಟ್ ಟೆಕ್ವೆಂಡೋ ಚಾಂಪಿಯನ್‍ಶಿಫ್ 2023-24  “ಸ್ಫರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಕೆಲವು ಸ್ಥಾನಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.

ವಿದ್ಯಾರ್ಥಿತರಗತಿಸ್ಫರ್ಧೆಪಡೆದಸ್ಥಾನ
ಸಾಥ್ವಿಕ್ ಹೆಚ್ 8 ನೇ ತರಗತಿ ಟೆಕ್ವೆಂಡೋದ್ವಿತೀಯ ಸ್ಥಾನ
ನಿವೀಕ್ಷನಯನ ಕೋಟೆಲ್ 3 ನೇ ತರಗತಿ ಟೆಕ್ವೆಂಡೋಪ್ರಥಮ ಸ್ಥಾನ

ವಿದ್ಯಾರ್ಥಿಗಳ ಅಮೋಘ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ. ಬಿ.ಎ. ಲಿಂಗಾರೆಡ್ಡಿ ಹಾಗೂ ಕಾರ್ಯದರ್ಶಿ ಶ್ರೀಮತಿ ಸುಜಾತಾಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಅಮೋಘ್ ಬಿ.ಎಲ್ ಹಾಗೂ ಆಡಳಿತಾಧಿಕಾರಿ ಡಾ|| ಟಿ ಎಸ್ ರವಿ, ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಪ್ರಭಾಕರ್ ಎಂ.ಎಸ್. ಶಾಲೆಯ ಟೆಕ್ವೆಂಡೋ ತರಬೇತುದಾರರಾದ ಸ್ವಾಮಿ ಸರ್ ಹಾಗೂ ದೈಹಿಕ ಶಿಕ್ಷಣ ವಿಭಾಗ ಮತ್ತು ಬೋಧಕವರ್ಗವು ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡುವುದರೊಂದಿಗೆ ಹರ್ಷವ್ಯಕ್ತಪಡಿಸಿ, ವಿದ್ಯಾರ್ಥಿಗಳು ಅಭಿನಂದಿಸುವುದರೊಂದಿಗೆ ಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾದವಾರದಲ್ಲಿ ಸಿಕ್ಕ ಕೋಟಿ ಕೋಟಿ ಹಣ : ಮೆಸೇಜ್ ಮಾಡಿ, ಕಾಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ಕೆ‌.ಸುಧಾಕರ್..?

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕಂತೆವಕಂತೆ ಹಣ ಸಾಗಾಣೆಯಾಗುವುದು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಹಣ ಸಾಗಾಟ ನಡೆಯುತ್ತದೆ ಎಂದೇ ಪೊಲೀಸರು ಹದ್ದಿನ ಕಣ್ಣು ಇಡುತ್ತಾರೆ. ಏಪ್ರಿಲ್ 25ರಂದು ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ ಕೋಟಿ

ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಹಣ ಬಿಡುಗಡೆ : ಕೇಳಿದ್ದು ಎಷ್ಟು ಕೋಟಿ, ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ..?

ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 3,454 ಕೋಟಿ ಹಣ ಬಿಡುಗಡೆ

ಖುಷಿಯಿಂದ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತೇನೆ : ಗೋವಿಂದ ಕಾರಜೋಳ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 ; ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನ ಮುಗ್ದರು ಅಮಾಯಕರು, ಕುಡಿಯುವ ನೀರಿಗೂ ಸಮಸ್ಯೆಯಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ.

error: Content is protected !!