ಸುದ್ದಿಒನ್, ಚಿತ್ರದುರ್ಗ : ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮೇ 05 ರಂದು ನಡೆದ 2024ನೇ ಸಾಲಿನ ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ(ನೀಟ್) ಪರೀಕ್ಷೆಯಲ್ಲಿ 179ನೇ ರ್ಯಾಂಕ್‌ನೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಕು. ಎನ್ ಮದನ್ ರಾಷ್ಟ್ರಮಟ್ಟದಲ್ಲಿ 179ನೇ ರ್ಯಾಂಕ್ ಪಡೆದು ಮಧ್ಯ ಕರ್ನಾಟಕ ಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಕು. ಸೃಜನ್ ಪಿ ಟಿ, 278, ಕು.ಜೀವಿಕಾ ಇ, 950ನೇ ರ್ಯಾಂಕ್‌ನೊಂದಿಗೆ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸಿರುವುದು ಇತಿಹಾಸ. ಕ್ರಮವಾಗಿ ಕು.ಪ್ರಣತಿ ಹೆಚ್ ವೈ 676, ಕು.ನೇಹಾ ಎಸ್ 674, ಕು.ಮನೋಜ್ ಎಂ 663, ರಕ್ಷೀತಾ ಬಳ್ಳಿ 663, ಕು. ಚಂದ್ರಿಕಾ ಕಲ್ಯಾಣಿ 662, ಕು.ಸಂಜಯ್ ಜಿ 643, ಕು.ಜೀವಿಕಾ ಇ 637, ಕು.ಹಿಮಂತ್‌ರಾಜ್ 630, ಕು.ಸೃಜನ್ 627, ಕು.ಪ್ರತಾಪ್‌ಸಿಂಗ್ 624, ಕು.ಆಕಾಶ್ ಪಿ 604, ಕು.ದೀಕ್ಷಾ ಪೂಜಾರ್ 602, ಅಂಕಗಳನ್ನು ಪಡೆದಿದ್ದಾರೆ. 600ಕ್ಕಿಂತ ಅಧಿಕ ಅಂಕಗಳನ್ನು ಒಟ್ಟು 20 ವಿದ್ಯಾರ್ಥಿಗಳು ಪಡೆದಿರುವುದು ಇತಿಹಾಸ. ನಿರಂತರ ತರಬೇತಿಯನ್ನು ಪಡೆದ ಕಾಲೇಜಿನ ಒಟ್ಟು 80 ವಿದ್ಯಾರ್ಥಿಗಳ ಬ್ಯಾಚ್‌ನಲ್ಲಿ 50 ವಿದ್ಯಾರ್ಥಿಗಳು ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಅರ್ಹರಾಗಿದ್ದಾರೆ.
ಈ ಅದ್ವಿತೀಯ ಸಾಧನಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಹೃದಯಪೂರ್ವಕವಾಗಿ ಆಭಿನಂದಿಸಿದ್ದಾರೆ.