ಮಂಗಳೂರು : ನಾಳೆಯಿಂದ ಎಸ್ಎಸ್ಎಲ್ಎಸ್ಸಿ ಪರೀಕ್ಷೆ ಆರಂಭವಾಗುತ್ತಿದೆ. ಈ ಮಧ್ಯೆ ಹಿಜಾಬ್ ವಿವಾದ ನಿಂತಿಲ್ಲ. ಹಿಜಾಬ್ ಧರಿಸಿದೇ ಪರೀಕ್ಷೆ ಬರೆಯಲ್ಲ ಅಂತ ವಿದ್ಯಾರ್ಥಿಗಳು ಹಠ ಮಾಡಿದ್ರೆ, ಸಮವಸ್ತ್ರ ಕಡ್ಡಾಯ ಅಂತ ಶಿಕ್ಷಣ ಇಲಾಖೆ ಈಗಾಗಲೇ ಹೇಳಿದೆ. ಈ ಸಂಬಂಧ ಕಾಂಗ್ರೆಸ್ ನಾಯ ಯು ಟಿ ಖಾದರ್ ಮಕ್ಕಳಿಗೆ ಸಲಹೆ ನೀಡಿದ್ದಾರೆ.
ಸಮವಸ್ತ್ರ ನೀತಿಯನ್ನು ವಿದ್ಯಾರ್ಥಿಗಳು ಪಾಲಿಸಿ. ನನ್ನ ಮಗಳಿಗೂ ಅಷ್ಟೇ ಇದನ್ನೇ ಹೇಳುತ್ತೇನೆ. ಎಲ್ಲಾ ಕಡೆ ಅನುಕೂಲಕರ ವಾತಾವರಣ ಇರಲಿ. ಮುಕ್ತವಾಗಿ ಪರೀಕ್ಷೆ ಬರೆಯಲು ಪೋಷಕರು ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿಗಳು ಮೊದಲು ತಮ್ಮ ಪರೀಕ್ಷೆಯ ಬಗ್ಗೆ ಗಮನ ಹರಿಸಲಿ.
ಖಾಸಗಿ ಶಾಲೆಗಳು ಸಹ ಅನುಕೂಲಕರ ವಾತಾವರಣ ನಿರ್ಮಿಸಲಿ. ಪರೀಕ್ಷೆ ಪರ ಮುಸ್ಲಿಂ ಧಾರ್ಮಿಕರ ಹೇಳಿಕೆ ಸ್ವಾಗತಾರ್ಹವಾಗಿದೆ. ಅವರ ಮಾತನ್ನು ಪ್ರತಿಯೊಬ್ಬರು ಪಾಲಿಸಬೇಕು. ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗದೇ ಪರೀಕ್ಷೆ ಬರೆಯಲಿ ಎಂದಿದ್ದಾರೆ.