ಬೆಂಗಳೂರು: ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದೆ. ರಾಜ್ಯದೆಲ್ಲೆಡೆ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ. ನಗರದಲ್ಲಿ ಶಾಲೆಗಳಲ್ಲಿ ಗುಲಾಬಿ ಹೂ ಕೊಟ್ಟು ಮಕ್ಕಳನ್ನ ಪರೀಕ್ಷೆಗೆ ಬರ ಮಾಡಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಹುಜಾಬ್ ವಿವಾದ ರಾಜ್ಯದಲ್ಲಿ ತಲೆದೂರಿತ್ತು. ಹೈಕೋರ್ಟ್ ತೀರ್ಪನ್ನು ಮಕ್ಕಳು ಧಿಕ್ಕರಿಸಿದ್ದರು. ಪರೀಕ್ಷಾ ಸಮಯ ಬೇರೆ ಆಗಿದ್ದರಿಂದ ಮುಂದೇನು ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಹಿಜಾಬ್ ಧರಿಸಿದರೆ ಪರೀಕ್ಷೆಗೆ ಅವಕಾಶವಿಲ್ಲ ಎಂದು ಇಲಾಖೆ ಸೂಚನೆ ನೀಡಿತ್ತು. ಇಂದು ಭವಿಷ್ಯದ ಯೋಚನೆ ಮಾಡಿ ಮಕ್ಕಳು ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾರೆ.