ಫೆಬ್ರವರಿ 17, 2026 ರಿಂದ ಪ್ರಾರಂಭವಾಗುವ CBSE 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಲಕ್ಷಾಂತರ ವಿದ್ಯಾರ್ಥಿಗಳು ಸಜ್ಜಾಗುತ್ತಿರುವಾಗ, ನ್ಯಾಯಯುತ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಯಬೇಕು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಮಾರ್ಗಸೂಚಿಗಳನ್ನು ಹೊರಡಿಸಿದೆ
CBSE ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಪ್ರಾರಂಭವಾಗುವ ಮೊದಲೇ CBSE ಮಾರ್ಗಸೂಚಿಗಳನ್ನ ನೀಡಿದೆ.ಪರೀಕ್ಷಾ ಕೇಂದ್ರವನ್ನ ಪ್ರವೇಶಿಸುವ ಮೊದಲು ಮಕ್ಕಳನ್ನ ತಪಾಸಣೆ ಮಾಡಲಾಗುತ್ತದೆ. ಶಾಲಾ ಸಮವಸ್ತ್ರದಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿಬೇಕು. ಸಮವಸ್ತ್ರಗಳು ಸ್ವಚ್ಛವಾಗಿರಬೇಕು ಮತ್ತು ನಿಯಮಗಳಿಗೆ ಅನುಸಾರವಾಗಿರಬೇಕು ಎಂದು ಹೇಳಿದೆ.
ಕಿವಿಯೋಲೆಗಳು, ಮೂಗಿನ ಪಿನ್’ಗಳು, ಉಂಗುರಗಳು, ಬಳೆಗಳು ಅಥವಾ ಹಾರಗಳನ್ನು ಪರೀಕ್ಷಾ ಹಾಲ್’ನಲ್ಲಿ ಅನುಮತಿಸಲಾಗುವುದಿಲ್ಲ. ಎಂಬ ನಿಯಮ ಹೊರಡಿಸಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ 45-60 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು.


