ಎರಡು ಕೋಮುಗಳ ಮಧ್ಯೆ ಕಲಹ : ಶ್ರೀಗಳ ಸಂಧಾನ ಸಫಲ

1 Min Read

ಹೊಸದುರ್ಗ, (ಡಿ.17) :  ಕಳೆದ 15 ದಿನಗಳ ಹಿಂದೆ ಬೆಲಗೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯುವತಿ ವಿಚಾರವಾಗಿ ನಡೆದಿದ್ದ ಘರ್ಷಣೆಯಿಂದ ಎರಡು ಕೋಮುಗಳ ಮದ್ಯೆ ಉಂಟಾಗಿದ್ದ ಮನಸ್ತಾಪವನ್ನು ಕುಂಚಟಿಗ ಮಠದ ಪೀಠಾಧ್ಯಕ್ಷ ಡಾ. ಶ್ರೀ ಶಾಂತವೀರ ಸ್ವಾಮೀಜಿ ಹಾಗೂ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಇತ್ಯರ್ಥಪಡಿಸುವ ಮೂಲಕ ಎರಡು ದೊಡ್ಡ ಸಮುದಾಯದಲ್ಲಿ ಸೌಹರ್ಧ ಭಾವನೆ ಮೂಡಿಸಿದ್ದಾರೆ.

ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಸಂಧಾನ ಸಭೆ : ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ವಿಚಾರವಾಗಿ ತಾಲೂಕಿನಲ್ಲಿ ಜಾತಿ ಸಂಘರ್ಷ ಏರ್ಪಡುತ್ತಿದೆ ಎಂಬುದನ್ನು ಅರಿತ  ಉಭಯ ಶ್ರೀಗಳು, ಎರಡು ಕಡೆಯವರನ್ನು ಶುಕ್ರವಾರ ಕುಂಚಿಟಿಗ ಮಠಕ್ಕೆ ಕರೆಯಿಸಿಕೊಂಡು ರಾಜೀ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕುಂಚಿಟಿಗ ಹಾಗೂ ಕುರುಬ ಸಮುದಾಯದಲ್ಲಿ ಒಗ್ಗಟ್ಟಿನ ಮಂತ್ರ ಪಠಣ ಮಾಡಿದ್ದು, ಮಠ ಮಾನ್ಯಗಳು ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ ಹಾಗೂ ಸಹೋದರರಂತೆ ಜೀವಿಸಬೇಕ್ಕೆಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಘಟನೆಯ ವಿವರ: ತಾಲೂಕಿನ ಬೆಲಗೂರು ಗ್ರಾಮದ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಮಧುಸೂಧನ್ ಎನ್ನುವ ಸಿಬ್ಬಂದಿ ನವೆಂಬರ್ ಮೂರನೇ ವಾರದಲ್ಲಿ ಇಂಟರ್ಷಿಪ್ ಕೆಲಸಕ್ಕೆ ಬಂದಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಯುವತಿಯ ಪೋಷಕರು ಆಸ್ಪತ್ರೆಗೆ ತೆರಳಿ ಮಧುಸೂದನ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಯುವತಿ ಮತ್ತು ಲ್ಯಾಬ್ ಟೆಕ್ನಿಷಿಯನ್ ಎರಡು ಕಡೆಯವರು ಪೋಲೀಸ್ ಠಾಣೆಗೆ ಪರಸ್ಪರ ದೂರು ದಾಖಲು ಮಾಡಿದ್ದರು. ಪೋಲೀಸರು ತನಿಖೆ ಕೈಗೊಂಡಿದ್ದರು.

ಜಾತಿ ಸಂಘರ್ಷಕ್ಕೆ ತಿರುಗಿದ ಪ್ರಕರಣ: ಗಲಾಟೆ ವಿಚಾರವಾಗಿ ಈ ಪ್ರಕರಣವು ಜಾತಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ತಾಲೂಕಿನಲ್ಲಿ ಮೊದಲಿನಿಂದಲೂ ಸಹೋದರರಂತಿರುವ ಶಾಂತವೀರ ಶ್ರೀಗಳು ಹಾಗೂ ಈಶ್ವರಾನಂದ ಶ್ರೀಗಳು ಇದರ ಗಂಭೀರತೆಯನ್ನು ಅರಿತು ಮುಂದಾಗುವ ಅನಾಹುತವನ್ನು ತಪ್ಪಿಸಲು ಸಭೆ ನಡೆಸಿ ರಾಜೀ ಸಂಧಾನ ಮಾಡಿದ್ದಾರೆ. ಮಠದಲ್ಲಿ ಸೇರಿದ್ದ ಎರಡು ಕಡೆಯವರು ಸ್ವಾಮೀಜಿ ಅವರ ಸಂದೇಶವನ್ನು ಒಪ್ಪಿ ಸಹೋದರರಂತೆ ಇರಲು ನಿರ್ಧರಿಸಿದರು.

Share This Article
Leave a Comment

Leave a Reply

Your email address will not be published. Required fields are marked *