ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್
ಪ್ರಕೃತಿಯಲ್ಲಿ ಬೆಳ್ಳಿ ಇತರೆ ಭಾರವಾದ ಮೂಲ ವಸ್ತುಗಳಂತೆ ನಕ್ಷತ್ರಗಳ ಸ್ಪೋಟಕ ಸಾವುಗಳಾದ ಸೂಪರ್‍ನೋವಾಗಳಲ್ಲಿ ಉತ್ಪತ್ತಿಯಾಗುತ್ತದೆ. ಈ ಮಹಾಸ್ಪೋಟಗಳ ಸಮಯದಲ್ಲಿ ನಡೆಯುವ ಪರಿಮಾಣು ಸಮ್ಮಿಳನ ಕ್ರಿಯೆಗಳಿಂದ ಬೆಳ್ಳಿ ರೂಪುಗೊಂಡು, ಬಾಹ್ಯಾಕಾಶದಲ್ಲಿ ಧೂಳಿನ ರೂಪದಲ್ಲಿ ಹರಡುತ್ತದೆ. ಈ ಧೂಳು ನಂತರ ಹೊಸ ನಕ್ಷತ್ರ ವ್ಯವಸ್ಥೆಗಳು ಮತ್ತು ಗ್ರಹಗಳ ರಚನೆಯಲ್ಲಿ ಸೇರಿಕೊಳ್ಳುತ್ತದೆ. ಭೂಮಿಯ ಹೊರಪದರದಲ್ಲಿ ಬೆಳ್ಳಿಯು ಮುಖ್ಯವಾಗಿ ಸಲ್ಪರ್ ಸಂಯುಕ್ತಗಳೊಂದಿಗೆ ಸೇರಿ ಖನಿಜಗಳಾಗಿ ಕಂಡುಬರುತ್ತದೆ. ಭೂಮಿಯ ಹೊರಪದರದೊಳಗೆ ಹೆಚ್ಚಿನ ತಾಪಮಾನ ಮತ್ತು ಒತ್ತಡವಿರುವ ಪ್ರದೇಶಗಳಲ್ಲಿ ಬಿಸಿಯಾದ ಲವಣಯುಕ್ತ ನೀರು ಸಿಲಿಕೇಟ್‍ಗಳು ಮತ್ತು ಇತರೆ ಕರಗಿದ ಲೋಹಗಳೊಂದಿಗೆ ಬೆಳ್ಳಿಯನ್ನು ಕರಗಿಸಿರುತ್ತದೆ. ಬೆಳ್ಳಿ (Ag) ಒಂದು ಬಿಳಿ ಹೊಳಪಿನ ಲೋಹವಾಗಿದ್ದು, ಪರಮಾಣುಶಕ್ತಿ 47, ಪರಮಾಣು ಕೂಡ 107.86 amu,
ಭೂಕಂಪಗಳು, ಜ್ವಾಲಾಮುಖಿ ಚಟುವಟಿಕೆಗಳು ಮತ್ತು ಭೂಪದರದ ಚಲನೆಗಳಿಂದ ಶಿಲೆಗಳಲ್ಲಿ ಬಿರುಕುಗಳು ಉಂಟಾಗುತ್ತವೆ. ಆಳವಾದ ಭೂಗರ್ಭದಿಂದ ಬರುವ ಈ ಅತಿಬಿಸಿಯಾದ ದ್ರಾವಣಗಳು ಈ ಬಿರುಕುಗಳ ಮೂಲಕ ಮೇಲ್ಮಖವಾಗಿ ಚಲಿಸಿದಾಗ ಉಷ್ಠತೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ಇದರಿಂದಾಗಿ ದ್ರಾವಣದಲ್ಲಿ ಕರಗಿದ್ದ ಬೆಳ್ಳಿ ಮತ್ತು ಇತರೆ ಖನಿಜಗಳು ಘನೀಕರಿಸಿ ಬಂಡೆಗಳ ಬಿರುಕುಗಳಲ್ಲಿ ಶೇಖರಣೆಗೊಳ್ಳುತ್ತವೆ. ಪ್ರಕೃತಿಯಲ್ಲಿ ಬೆಳ್ಳಿಯು ಮುಖ್ಯವಾಗಿ ಬಿಸಿನೀರಿನ ದ್ರಾವಣಗಳ ಮೂಲಕ ಶೇಖರಣೆಗೊಳ್ಳುತ್ತದೆ. ಮತ್ತು ಇದು ಇತರೆ ಲೋಹಗಳಾದ ತಾಮ್ರ, ಸೀಸ ಅಥವಾ ಸತುಗಳ ಗಣಿಗಾರಿಕೆಯಲ್ಲಿ ಉಪ-ಉತ್ಪನ್ನವಾಗಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ.
ಕರ್ನಾಟಕದಲ್ಲಿ ಬೆಳ್ಳಿ ದೊಡ್ಡ ಪ್ರಮಾಣದ ನಿಕ್ಷೇಪಗಳ ಬಗ್ಗೆ ನಿಖರ ಮಾಹಿತಿ ಕಡಿಮೆ ಇದ್ದರೂ ಚಿನ್ನ, ಕಬ್ಬಿಣದಂತಹ ಖನಿಜಗಳ ಜೊತೆ ಬೆಳ್ಳಿ ಕೂಡ ರಾಜ್ಯದ ಪ್ರಮುಖ ಖನಿಜಗಳಲ್ಲಿ ಒಂದಾಗಿದೆ. ವಿಶೇಷವಾಗಿ ಚಿನ್ನದ ಗಣಿಗಳು ಇರುವ ಪ್ರದೇಶಗಳಲ್ಲಿ ಬೆಳ್ಳಿಯ ಖನಿಜಗಳು ಸಿಗುವ ಸಾಧ್ಯತೆಗಳಿದ್ದು, ರಾಯಚೂರು ಜಿಲ್ಲೆಯು ಬೆಳ್ಳಿ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ. ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕೇಂದ್ರದ ಏಜೆನ್ಸಿಗಳು ನಡೆಸಿದ ಶೋಧನೆಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಬೆಳ್ಳಿಯ ಖನಿಜಗಳು ಪತ್ತೆಯಾಗಿದ್ದು, ಆರ್ಥಿಕತೆಗೆ ಕೊಡುಗೆ ನೀಡುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ 2024-25ನೇ ಸಾಲಿನಲ್ಲಿ ಒಟ್ಟು 149 ಕೆ.ಜಿ. ಬೆಳ್ಳಿ ಹೊರತೆಗೆಯಲಾಗಿದೆ. ಇದು ಭಾರತದ ಒಟ್ಟು ಬೆಳ್ಳಿ ಉತ್ಪಾದನೆಯಲ್ಲಿ ಅತ್ಯಲ್ಪ ಪ್ರಮಾಣವಾಗಿದೆ.
ಪ್ರಾಚೀನ ಕಾಲದ ಆಭರಣಗಳು, ನಾಣ್ಯಗಳು, ಕನ್ನಡಿಗಳು ಮುಂತಾದವುಗಳ ತಯಾರಿಕೆಯಲ್ಲಿ ಬೆಳ್ಳಿಪ್ರಮುಖವಾಗಿ ಉಪಯೋಗವಾಗುತ್ತಿದ್ದು, ಈಗಿನ ಕಾಲದಲ್ಲಿ ಔಷಧ, ಛಾಯಾಗೃಹಣ, ಎಲೆಕ್ಟ್ರಾನಿಕ್ಸ್‍ಗಳಲ್ಲಿ ಹೆಚ್ಚಿನ ಉಪಯೋಗವಾಗುತ್ತದೆ.







