ಪರಶುರಾಂಪುರ ಹೋಬಳಿ ತಾಲ್ಲೂಕು ಕೇಂದ್ರಕ್ಕಾಗಿ ಮುಷ್ಕರ ; ರೈತರ ಮನವೊಲಿಸಿದ ತಹಶೀಲ್ದಾರ್

suddionenews
1 Min Read

ಚಳ್ಳಕೆರೆ : ಪರಶುರಾಂಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಪರಿಗಣಿಸುವಂತೆ ಜನಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಪರಶುರಾಂಪುರ ಶಾಖೆ ಅನಿರ್ದಿಷ್ಟ ಕಾಲ ಮುಷ್ಕರ ಹೂಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿ ತಹಶೀಲ್ದಾರ್ ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಜೂನ್.01 ರಂದು ಬೆಳಿಗ್ಗೆ 10:00 ಗಂಟೆಗೆ ಮುಷ್ಕರ ಹಮ್ಮಿಕೊಂಡ ಸಂಘಟನೆಯವರು, ಕಳೆದ 20 ವರ್ಷದಿಂದ ಈ ಬೇಡಿಕೆಯನ್ನು ನಿರಂತರವಾಗಿ ಶಾಸಕರು ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಸಲ್ಲಿಸುತ್ತಾ ಬಂದಿದ್ದೇವೆ ಇದಲ್ಲದೆ ತಾಲೂಕಿನಲ್ಲಿರುವ ರೈತರಿಗೆ ಬೆಳೆ ವಿಮೆ ಸಂದಾಯವಾಗಿಲ್ಲ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರವನ್ನು ಕೈಬಿಡುವುದಿಲ್ಲ ವೆಂದು ಪಟ್ಟು ಹಿಡಿದರು ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ರಘುಮೂರ್ತಿ ಸರ್ಕಾರದ ಮಟ್ಟದಲ್ಲಿ ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಪರಿಗಣಿಸಲು ಪರಿಶೀಲನೆ ಹಂತದಲ್ಲಿದೆ.

ಬೆಳೆ ವಿಮೆಗೆ  ಸಂಬಂಧಿಸಿದಂತ ಈಗಾಗಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಂಬಂಧಿಸಿದ ಕಂಪನಿಯ ಜನರೊಂದಿಗೆ ಮಾತನಾಡಿ ಹಾಗೂ ಸಭೆ ಮಾಡಿ ಒಂದು ತಿಂಗಳ ಒಳಗಾಗಿ ಹಣವನ್ನು ರೈತರ ಖಾತೆಗೆ ಹಾಕುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಯಾವುದೇ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ.

ರೈತರಿಗೋಸ್ಕರ ತಾಲೂಕಿನಲ್ಲಿ ಈಗಾಗಲೇ 67 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಪರಿಹಾರ ನೀಡಲಾಗಿದೆ. ದಾರಿ, ಸ್ಮಶಾನ ಮುಂತಾದ ಸಮಸ್ಯೆಗಳನ್ನು ನೇರವಾಗಿ ಗ್ರಾಮಕ್ಕೆ ಹೋಗಿ ಬಗೆಹರಿಸಲಾಗುತ್ತಿದೆ. ಅತಿ ಮಳೆಯಿಂದ ನಷ್ಟವಾಗದಂತೆ ಎಲ್ಲಾ ರೈತರಿಗೂ ಈಗಾಗಲೇ ಪರಿಹಾರ ನೀಡಲಾಗಿದೆ ತಾಲೂಕಿನಲ್ಲಿರುವ ಎಲ್ಲಾ ಗ್ರಾಮಗಳನ್ನು ಮನೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಮಸ್ಯೆ ಮುಕ್ತ  ಗ್ರಾಮಗಳನ್ನಾಗಿ 40 ಗ್ರಾಮಗಳನ್ನು ಮಾಡಲಾಗಿದೆ.

ಉಳಿದಂತೆ ಎಲ್ಲಾ ಗ್ರಾಮಗಳನ್ನು ಕೂಡ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುತ್ತಿದೆ. ರೈತರ ಹಿತಕಾಯುವ ದೃಷ್ಟಿಯಲ್ಲಿ ತಾಲೂಕಾಡಳಿತ ರೈತರೊಂದಿಗೆ ಉದ್ದೇಶಿತ ಮುಷ್ಕರವನ್ನು ಕೈ ಬಿಡುವಂತೆ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *