ಕೆಲಸವನ್ನು ಮಾಡುವುದರ ಮೂಲಕ ಒತ್ತಡವನ್ನು ನಿವಾರಣೆ ಮಾಡಬೇಕು : ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ(ಜೂ.12) :  ಕಾಯಕವನ್ನು ಮಾಡುವುದರ ಮೂಲಕ ಶರೀರಕ್ಕೆ ಬೀಳುವ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇಂಡಿಯಾನ ಎಸ್.ಜೆ.ಎಂ. ಹಾರ್ಟ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣಾ ಶಿಬಿರದ ಸಾನಿಧ್ಯವಹಿಸಿ ಮಾತನಾಡಿದರು.

ಇಂದಿನ ಆಧುನಿಕ ಜಗತ್ತಿನಲ್ಲಿ ಒತ್ತಡ ಎನ್ನುವುದು ಅನಿವಾರ್ಯವಾಗಿದೆ. ಇದರಲ್ಲಿ ಪತ್ರಕರ್ತರು ಸಹಾ ಹೊರತಾಗಿಲ್ಲ, ಅವರು ಸಹಾ ಒತ್ತಡದಲ್ಲಿಯೇ ಕೆಲಸವನ್ನು ಮಾಡುತ್ತಾರೆ. ಇದರಿಂದ ಮಾನವನ ಆಯಸ್ಸನ್ನು ಕಡಿಮೆ ಮಾಡುತ್ತದೆ. ಜಪಾನಿಯರು ತಮ್ಮ ಜೀವಿತಾವಾಧಿಯನ್ನು ಹೆಚ್ಚಳ ಮಾಡಿಕೊಂಡಿರುವುದಕ್ಕೆ ಅವರು ಮಾಡುವ ಕಾಯಕ ಕಾರಣವಾಗಿದೆ. ನಮ್ಮ ದೇಶದಲ್ಲಿ 6 ರಿಂದ 8 ಗಂಟೆ ಮಾತ್ರ ಕೆಲಸ ಮಾಡುತ್ತಾರೆ ಆದರೆ ಜಪಾನ್‍ನಲ್ಲಿ 14 ರಿಂದ 16 ಗಂಟೆಯವರೆಗೆ ಕೆಲಸವನ್ನು ಮಾಡುವುದರ ಮೂಲಕ ತಮ್ಮ ಆಯಸ್ಸನ್ನು ಹೆಚ್ಚಳ ಮಾಡಿಕೊಂಡಿದ್ದಾರೆ.

ಕೆಲಸವನ್ನು ಮಾಡುವುದರ ಮೂಲಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಎಂದರು.
ಶರೀರಕ್ಕೆ ಪರಿಶ್ರಮವನ್ನು ಹಾಕಿದಾಗ ಮಾತ್ರ ನಮ್ಮ ಮೇಲಿನ ಒತ್ತಡ ನಿವಾರಣೆಯಾಗಲು ಸಾಧ್ಯವಿದೆ. ಕಾಯಕ ಮಾಡುವುದರಿಂದ ಕೈಲಾಸವನ್ನು ಕಾಣಲು ಸಾಧ್ಯವಿದೆ, ಆದರೆ ನಮ್ಮವರು ಕಾಯಕ ಮಾಡದೇ ಕೈಲಾಸವನ್ನು ಕಾಣುವ ಹಂತದಲ್ಲಿದ್ದಾರೆ. ಮಾನವನ ದೇಹದಿಂದ ಬೆವರು ಹೂರಬರುವುದರ ಮೂಲಕ ಒತ್ತಡ ನಿವಾರಣೆಯಾಗುತ್ತದೆ. ಇದು ಯೋಗ, ವ್ಯಾಯಾಮ, ಕ್ರೀಡೆ, ಯಾವುದರಿಂದಲಾದರೂ ಆಗಬಹುದಾಗಿದೆ. ಶಾರೀರಿಕ ಪರಿಶ್ರಮಕ್ಕೆ ಶ್ರಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ ಇದರಿಂದ 70 ರಿಂದ 80 ವರ್ಷ ಬದುಕಲು ಸಾಧ್ಯವಿದೆ ಎಂದು ಶರಣರು ತಿಳಿಸಿದರು.

ಇಂದಿನ ವೈದ್ಯಕೀಯ ತಂತ್ರಜ್ಞಾನವೂ ಸಹಾ ಉತ್ತಮವಾದ ಚಿಕಿತ್ಸೆಯನ್ನು ನೀಡುತ್ತಿದೆ ಯಾವುದೇ ರೋಗಗಳಾದರೂ ಸಹಾ ಚಿಕಿತಸೆಗೆ ಮುಂದಾಗಿದೆ. ಇದರಿಂದ ತುಂಬಾ ಅನುಕೂಲವಾಗುತ್ತಿದೆ. ನಮ್ಮಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕಿದೆ ಅದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯವನ್ನು ಬದಗಿಸಬೇಕಿದೆ.

ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡುವುದರಿಂದ ಏನು ಪ್ರಗತಿಯನ್ನು ಸಾಧಿಸಿದಂತೆ ಆಗುವುವುದಿಲ್ಲ, ಕರೋನಾ ಸಮಯದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಹಲವಾರು ಜನತೆ ಸಂಕಷ್ಠ ಪಟ್ಟಿದ್ದಾರೆ. ಮೆಡಿಕಲ್ ಕಾಲೇಜು ಬಂದರೆ 200 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಆದರೆ ಆಸ್ಪತ್ರೆ ಮೇಲ್ದರ್ಜೆ ಏರಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿವಿಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಆರೋಗ್ಯದ ಬಗ್ಗೆ ಎಲ್ಲರೂ ಸಹಾ ಕಾಳಜಿಯನ್ನು ವಹಿಸಬೇಕಿದೆ. ಇದರ ಬಗ್ಗೆ ಯಾರೂ ಸಹಾ ನಿರ್ಲಕ್ಷ ಮಾಡಬಾರದು ಇದು ಮುಂದೆ ಆಪಾಯವನ್ನು ತರುತ್ತದೆ. ಆರೋಗ್ಯದಲ್ಲಿ ಇಂದಿನ ತಂತ್ರಜ್ಞಾನ ಮುಂದುವರೆದಿದೆ ಯಾವ ರೋಗಕ್ಕಾದರೂ ಸಹಾ ಚಿಕಿತ್ಸೆ ಇದೆ. ಈ ಮುಂಚೆ ಚಿಕಿತ್ಸೆಗಾಗಿ ಹೊರದೇಶಕ್ಕೆ ಹೋಗಬೇಕಿತ್ತು ಆದರೆ ಈಗ ನಮ್ಮ ದೇಶದಲ್ಲಿಯೇ ಚಿಕಿತ್ಸೆ ಸಿಗುತ್ತದೆ. ನಿಗಧಿತವಾದ ವಯಸ್ಸಿನ ನಮತರೆ ವೈದ್ಯರ ಬಳಿ ತಪಾಸಣೆಯನ್ನು ಮಾಡಿಸಿ ಇದರಿಂದ ನಿಮ್ಮಲ್ಲಿನ ರೋಗದ ಬಗ್ಗೆ ತಿಳಿಯುತ್ತದೆ. ಕೂಡಲೇ ಚಿಕಿತ್ಸೆಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಚಿತ್ರದುರ್ಗದಲ್ಲಿ ಅತಿ ಶೀಘ್ರದಲ್ಲಿಯೇ ಮೆಡಿಕಲ್ ಕಾಲೇಜು ಪ್ರಾರಂಭವಾಗಲಿದೆ. ಇದರಿಂದ ನಾಗರಿಕರಿಗೆ ಅನುಕೂಲವಾಗಲಿದೆ. ಪ್ರಧಾನ ಮಂತ್ರಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿದ್ದಾರೆ. ಸರ್ಕಾರ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ ಇದರ ಬದಲಿಗೆ ಆರೋಗ್ಯ ವಿಮೆಯನ್ನು ಜಾರಿ ಮಾಡುವುದರ ಮೂಲಕ ಜನತೆಗೆ ಅನುಕೂಲ ಮಾಡಿಕೊಡಬೇಕಿದೆ ಇದರಿಂದ ಆರೋಗ್ಯದ ಮೇಲೆ ಮಾಡುವ ಖರ್ಚು ಉಳಿಯುತ್ತದೆ ಎಂದ ಅವರು ಕರೋನಾ ಸಮಯದಲ್ಲಿ ವ್ಯದ್ಯರು, ನರ್ಸ್ ಸೇರಿದಂತೆ ಇತರೆ ಹಲವಾರು ಜನತೆ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಇದರಿಂದ ನಮ್ಮ ದೇಶದಲ್ಲಿ ಕರೋನ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಯಲಾಯಿತು ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ಡಾ. ಕಾರ್ತಿಕ ಮಾತನಾಡಿ, ಇಂದು ಸಂಭವಿಸುತ್ತಿರುವ ಸಾವಿನ ಪ್ರಮಾಣದಲ್ಲಿ ಶೇ. 40 ರಿಂದ 60 ರಷ್ಟು ಹೃದಯಾಫಾತದಿಂದ ಸಾವುಗಳಾಗುತ್ತಿವೆ. ಇಂದಿನ ದಿನಮಾನದಲ್ಲಿ ಎಲ್ಲಾ ರೋಗಿಗಳಿಗೆ ಸಹಾ ಚಿಕಿತ್ಸೆ ಇದೆ. ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವುದಕ್ಕಿಂತ ಮುಂಚೆಯೇ ಚಿಕಿತ್ಸೆಯನ್ನು ಪಡೆಯುವುದು ಇಂದಿನ ದಿನಮಾನದಲ್ಲಿ ಅಗತ್ಯವಾಗಿದೆ. ಬಿಪಿ. ಸಕ್ಕರೆ ಖಾಯಿಲೆಯನ್ನು ನಿರ್ಲಕ್ಷ ಮಾಡಬೇಡಿ ಕಾಲ ಕಾಲಕ್ಕೆ ತಕ್ಕಂತೆ ತಪಾಸಣೆಯನ್ನು ಮಾಡಿಸಿ ಔಷಧಿಯನ್ನು ಪಡೆಯಿರಿ. ಇಂದು ಸಣ್ಣ ಪುಟ್ಟ ಖಾಯಿಲೆಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ತಂಬಾಕು ಸೇವನೆಯಿಂದ ದೇಹಕ್ಕೆ ಯಾವುದೇ ರೀತಿಯಿಂದಲೂ ಅನುಕೂಲ ಇಲ್ಲ, ಇದರಿಂದ ತೊಂದರೆ ಹೆಚ್ಚು ಇದನ್ನು ಸೇವನೆ ಮಾಡುವುದನ್ನು ಬಿಡುವುದು ಒಳ್ಳೆಯದು ಇದರಿಂದ ಮಾನವ ಆಯಸ್ಸು ಕಡಿಮೆಯಾಗುತ್ತದೆ ಎಂದು ಡಾ.ಕಾರ್ತಿಕ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಸವೇಶ್ವರ ಆಸ್ಪತ್ರೆಯ ಡೀನ್ ಪ್ರಶಾಂತ್, ಇಂಡಿಯಾನ ಎಸ್.ಜೆ.ಎಂ. ಹಾರ್ಟ್ ಸೆಂಟರ್‌ನ ಕಾರ್ಯ ನಿವಾಹಕ ಅಧಿಕಾರಿ ರೂಪೇಶ್ ಶಟ್ಟಿ ಭಾಗವಹಿಸಿದ್ದರು. ಸಮಾರಂಭದ ಆಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ ವಹಿಸಿದ್ದರು.

ಸಿದ್ದರಾಜು ಸ್ವಾಗತಿಸಿ, ತಿಪ್ಪೇಸ್ವಾಮಿ ನಾಕಿಕೆರೆ ಆಶಯ ನುಡಿಗಳನ್ನಾಡಿದರು. ರವಿಕುಮಾರ್ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಇತ್ತಿಚೆಗೆ ನಿಧನರಾದ ಅಂಜನಪ್ಪರವರ ಆತ್ಮಕ್ಕೆ ಶಾಂತಿಯನ್ನು ಕೋರಿ ಮೌನಾಚರಣೆ ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!