Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಪದ್ಧತಿ ನಿಲ್ಲಲಿ : ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Facebook
Twitter
Telegram
WhatsApp

 

ಚಿತ್ರದುರ್ಗ, ಸಿರಿಗೆರೆ, ನವೆಂಬರ್. 10 : ದೇಶಾದ್ಯಾಂತ ಇಂದು ಅನೇಕ ಕ್ರೌರ್ಯ, ಅಮಾನುಷ ಕೃತ್ಯಗಳು, ದುಶ್ಚಟಗಳು ಹೆಚ್ಚಾಗಿದ್ದು, ಮನುಷ್ಯ ಮನುಷ್ಯನನ್ನೆ ತಿನ್ನುವ ಕಾಲ ಬಂದಿದೆ. ಆದ್ದರಿಂದ ಎಲ್ಲರೂ ಸಕಲ ಜೀವರಾಶಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರ ಚಿಂತನೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಸಿರಿಗೆರೆಯ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾನುವಾರ ಜರುಗಿದ ತರಳಬಾಳು ನುಡಿಹಬ್ಬ 2024ರ ಮೂರನೇ ದಿನದ ಮಹಿಳೆ ಮತ್ತು ಯುವಜನತೆ ಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಎಳೆಯ ಮಕ್ಕಳು ಖಾಲಿ ಚೀಲಗಳಿದ್ದಂತೆ. ಹಾಗಾಗಿ ಅವರಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಲು ಸಾಧ್ಯ. ಭಾರತ ಸಾಂಸ್ಕøತಿಕವಾಗಿ ಹಿರಿಮೆ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥಗಳನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪುರಸ್ಕೃತ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಕರೆಯುವ ಪದ್ಧತಿಗೆ ತೀಲಾಂಜಲಿ ಹಾಕಿ, ಅದಕ್ಕಾಗಿ ಯೋಗ್ಯ ಸಮಿತಿಯನ್ನು ರಚಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರ್ಹ, ಯೋಗ್ಯರನ್ನು ಆಯ್ಕೆ ಮಾಡುವ ಹೊಸ ವ್ಯವಸ್ಯೆಗಳು ಜಾರಿಯಾಗಬೇಕು ಎಂದರು.

ಹೊಸನಗರ ಮೂಲೆಗದ್ದೆಯ ಸದಾನಂದ ಶಿವಯೋಗಾಶ್ರಮದ ಶ್ರೀಮ.ನಿ.ಪ್ರ ಅಭಿನವ ಚನ್ನಬಸವಸ್ವಾಮಿಗಳು ಮಾತನಾಡಿ ಭಾರತದಲ್ಲಿ ಸಾಧು ಸಂತರಿಂದ ಭಾರತಕ್ಕೆ ಬೆಲೆ ಬಂದಿದೆ. ಸಂಸ್ಕಾರಯುತ ಶಿಕ್ಷಣ ಇಂದು ಎಲ್ಲಾಕಡೆ ಕಡಿಮೆಯಾಗಿದೆ. ಆದರೆ ಇಂದು ಮಠಗಳಿಂದ ಶಿಕ್ಷಣ ಪಡೆದವರಲ್ಲಿ ಸಂಸ್ಕಾರಯುತ ಶಿಕ್ಷಣ, ಶಿಸ್ತು, ರೂಢಿಯಲ್ಲಿದೆ. ಭಾರತದಲ್ಲಿ ವಚನಗಳನ್ನು ತಂತ್ರಾಂಶದಲ್ಲಿ ರೂಪಿಸಿರುವ ಏಕೈಕ ಗುರುಗಳು ಸಿರಿಗೆರೆಯ ಶ್ರೀಗಳು ಮೊದಲಿಗರು. ಜೀವನದಲ್ಲಿ ಗುರುಗಳ ಸೇವೆ ಮಾಡುವುದು ಪುಣ್ಯದ ಕೆಲಸ. ಎಲ್ಲರ ಕನಸು ನನಸುಮಾಡುವ ಇಡೀ ಸಮಾಜ ಜಗತ್ತು, ನೋಡುವ ಹಾಗೆ ಸಾಧನೆ ಮಾಡುವ ಶಕ್ತಿ ನಮ್ಮೊಳಗಿದೆ. ವಸ್ತುಗಳ ಬದಲು ವ್ಯಕ್ತಿಗಳನ್ನು ಪ್ರೀತಿ ಮಾಡಿದಾಗ ನಮ್ಮ ಜೀವನಕ್ಕೆ ಬೆಲೆ ಲಭಿಸಲಿದೆ. ನಾಡಿನಲ್ಲಿರುವ ಬಹು ದೊಡ್ಡ ಗುರುಮನೆ ಎಂದರೆ ಅದುವೇ ನಮ್ಮ ಸಿರಿಗೆರೆಯ ತರಳಬಾಳು ಮನೆ. ನಾಡೊಂದು ಸುಖ ಸಮೃದ್ಧಿಯ ವೇದಿಕೆಯಾಲಕಿ ಎಂದರು.

 

ದಾವಣಗೆರೆಯ ಕನ್ನಡ ಉಪನ್ಯಾಸಕಿ ಡಾ.ಗೀತಾಬಸವರಾಜ್ ಮಾತನಾಡಿ ಶತಶತಮಾನಗಳಿಂದ ಮಹಿಳೆ ಶ್ರೇಷ್ಠಳು, ವಚನಕಾರರು ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಕೌಟುಂಬಿಕ ವಲಯಗಳಲ್ಲಿ ಮಹಳೆಯ ಮಹತ್ವ. ಮಹಿಳೆಯು ಬದುಕಿನ ನೇತಾರಳಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯ ಸಾಧನೆಯ ಹಾದಿ ಮೆಚ್ಚುವಂತಹದ್ದು. ಸಾಧನೆಗೆ ಸ್ಪೂರ್ತಿಯೇ ಮಹಿಳೆ. ಪ್ರತಿಯೊಬ್ಬ ಮಹಿಳೆಯಲ್ಲಿ ಚೈತನ್ಯ ಶಕ್ತಿ ಅಡಗಿದೆ. ಅಸಾಹಕತೆಯ ಸ್ಥಿತಿಯ ಮಹಿಳೆಯು ಇಂದು ಎಲ್ಲಾ ನಿಲುವುಗಳನ್ನು ದಾಟಿ ಮೆಟ್ಟಿನಿಂತಿದ್ದಾಳೆ.

 

ಉಡುಪಿಯ ಹಾಸ್ಯ ಭಾಶಣಕಾರರಾದ ಸಂಧ್ಯಾಶೆಣೈ ಮಾತನಾಡಿ ಮೌಲ್ಯಗಳು ಯುವಕರ ರಕ್ತದಲ್ಲಿ ಕರಗತವಾಗಬೇಕು. ಯಾರನ್ನೇ ಅಪಮಾನ ಮಾಡದೇ ಬದುಕುವುದು ಸಾರ್ಥಕ. ಯುವಕರು ಹಸತನ ಹೊಸ ವಿಚಾರಗಳಿಗೆ ಬೆಲೆ ನೀಡಿ ಸಂಸ್ಕಾರಯುತ ಜೀವನ ನಡೆಸಬೇಕಿದೆ. ಇಂದು ತಪ್ಪನ್ನು ಸರಿಪಡಿಸುವ ಜನರೇ ಸಿಗುವುದಿಲ್ಲ. ನಮ್ಮ ಆತ್ಮ ಹೇಳಿದಾಗೆ ಕೇಳಿ ಸಾಧಿಸುವ ಛಲ ನಮ್ಮಲ್ಲಿರಬೇಕು. ನಾವುಗಳು ಯಾವುದನ್ನು ರೂಢಿಸಿಕೊಳ್ಳುವತ್ತೇವೆಯೋ ಅದನ್ನು ಪಡೆಯುತ್ತೇವೆ ಎಂದರು.

 

2024ರ ರಾಜ್ಯೋತ್ಸವ ಪುರಸ್ಕøತರಾದ ಸಾಹಿತಿಗಳಾದ ಬಿ.ಟಿ.ಲಲಿತನಾಯ್ಕ್ ಮಾತನಾಡಿ ಬುದ್ದ, ಬಸವ, ಅಂಬೇಡ್ಕರ್ ಈ ಮೂರು ವ್ಯಕ್ತಿಗಳ ಆಶಯ ನಮ್ಮ ಜೀವನಕ್ಕೆ ಅತ್ಯಗತ್ಯ. ಗುರುಗಳ ಬಗ್ಗೆ ನಮ್ಮಲ್ಲಿರುವ ಭಯವೇ ನಮ್ಮ ಶಕ್ತಿಯಾಗಿ ಬೆಳೆಸಯುತ್ತದೆ. ಎಲ್ಲರೂ ಮೌಢದಿಂದ ಹೊರಬಂದು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಬದುಕಬೇಕಿದೆ.

 

ತಾಳಿಕೋಟೆಯ ಅಶೋಕ್.ಎಸ್.ಹಂಜಲಿ ಮಾತನಾಡಿ ಉತ್ಸಾಹ ಚಿಲುಮೆಯ ಯುವಕರು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಯುವಕರು ಗುರುಭಕ್ತಿ, ದೇಶಭಕ್ತಿ ಶ್ರದ್ಧಾಭಕ್ತಿ ಬೆಳೆಸಿಕೊಂಡು ನಾಡನ್ನು ಕಟ್ಟಬೇಕು. ಯುವಕರು ನಾಡನ್ನು ಬೆಳಗುವ ನಕ್ಷತ್ರಗಳಾಗಬೇಕು. ಜೊತೆಗೆ ಧನಾತ್ಮಕ ಚಿಂತ£, ದೇಶಪ್ರೇಮ ಬೆಳೆಸಿಕೊಳ್ಳಬೇಕು ಯುವಕರಿಂದ ಮಾತ್ರ ದೇಶದ ಬದಲಾವಣೆ ಮಾತ್ರ.
ಕಾರ್ಯಕ್ರಮದಲ್ಲಿ ಹಾಸನ ಹಾಗೂ ಬಳ್ಳಾರಿಯ ಕಸಾಪ ಅಧ್ಯಕ್ಷರಾದ ಎಚ್.ಎಲ್ ಮಲ್ಲೇಶ ಗೌಡ, ನಿಷ್ಠಿ ರುದ್ರಪ್ಪ ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿ ಯುದ್ಧ : ಶಿಶಿರ್ ಗೆ ಸವಾಲು ಹಾಕಿದ ಚೈತ್ರಾ..!

ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಶಿಶಿರ್ ಹಾಗೂ ಚೈತ್ರಾ ಅಣ್ಣ ತಂಗಿಯಂತೆ. ಚೈತ್ರಾ ಕುಗ್ಗಿದಾಗೆಲ್ಲ ಶಿಶಿರ್ ಧೈರ್ಯ ತುಂಬಿದ್ದಾರೆ. ಅದಕ್ಕಾಗಿಯೇ ಬಿಗ್ ಬಾಸ್ ತಂಗಿ ನಿನಗಾಗಿ ಎಂಬ ಫೋಸ್ಟರ್ ಅನ್ನೇ ರಿಲೀಸ್

ಬ್ಯಾಂಕ್‍ಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮದಾನ

ಚಿತ್ರದುರ್ಗ. ನ.21: ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರೆದರೆ

error: Content is protected !!