ಬೆಂಗಳೂರು: ಮೊನ್ನೆಯಷ್ಟೇ 9 ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅದರಲ್ಲಿ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಕೂಡ ಒಬ್ಬರಾಗಿದ್ದರು. ಇದೀಗ ಅವರ ವರ್ಗಾವಣೆ ಆದೇಶವನ್ನ ಸರ್ಕಾರವೇ ತಡೆಹಿಡಿದಿದೆ.
ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಚನ್ನಣ್ಣನವರ್ ರನ್ನ ವರ್ಗಾವಣೆ ಮಾಡಿ ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿಯಾಗಿ ನೇಮಕ ಮಾಡಿದ್ದರು. ಆದ್ರೆ ಈಗ ಆ ವರ್ಗಾವಣೆಗೆ ತಡೆ ನೀಡಲಾಗಿದೆ.
ಇತ್ತೀಚೆಗೆ ರವಿ ಚನ್ನಣ್ಣನವರ್ ಸೇರಿದಂತೆ ಹಲವರ ವಿರುದ್ಧ ಗ್ರಾನೈಟ್ ಉದ್ಯಮಿಯೊಬ್ಬರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು ತಡೆಯಾಜ್ಞೆ ತಂದಿದ್ದರು. ಈ ಬೆನ್ನಲ್ಲೇ ಅವರನ್ನ ಸರ್ಕಾರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ವರ್ಗಾವಣೆ ಮಾಡಿತ್ತು. ಇದೀಗ ಸರ್ಕಾರ ಆ ಆದೇಶವನ್ನ ತಡೆಹಿಡಿದಿದೆ.