10 ವರ್ಷ ಸಿಎಂ ಅಂತೀರಿ.. 10 ತಿಂಗಳು‌ ಇರಿ ಸಾಕು : ಸಿದ್ದರಾಮಯ್ಯರಿಗೆ ಕುಮಾರಸ್ವಾಮಿ ಸವಾಲು..!

suddionenews
1 Min Read

ಬೆಂಗಳೂರು: ಮೂಡಾ ಹಗರಣ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಇಂದು ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರ ಹಾಕಿದರು.

ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ನಡೆಸುತ್ತಿರುವುದು ಸಿದ್ದರಾಮಯ್ಯ ಮಾತ್ರವಲ್ಲ. ಇಡೀ ಸರ್ಕಾರವನ್ನೇ ಕಿತ್ತು ಒಗೆಯಬೇಕು. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತಿದ್ದೇವೆ. ಕ್ರಿಯಾಶೀಲ ಯುವಕ ವಿಜಯೇಂದ್ರ ನೇತೃತ್ವದಲ್ಲಿ, ರಾಧಾ ಮೋಹನ್ ಅಗರ್ ವಾಲ್ ಸೂಚನೆ ಮೇರೆಗೆ ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಪ್ರತಿಭಟನೆಗೆ ಪರ್ಯಾಯವಾಗಿ ಅವರು ನಿನ್ನೆಯಿಂದ ಹೋರಾಟ ಮಾಡುತ್ತಿದ್ದಾರೆ. ನನ್ನ ವಿರುದ್ಧ ವೈಯಕ್ತಿಕವಾಗಿ ಮಾತನಾಡಿರುವ ವಿಚಾರಕ್ಕೆ ನಾನು ಅಲ್ಲಿಯೇ ಪ್ರತಿಕ್ರಿಯೆ ನೀಡಿದ್ದೇನೆ. ಬಿಡದಿ, ರಾಮನಗರದಲ್ಲಿಯೇ ಉತ್ತರಿಸುತ್ತೇನೆ. ನಾನು ಜೈಲಿಗೆ ಹೋಗಲು ಸಿದ್ದ ಎಂದಿದ್ದಾರೆ.

ಹಣ, ಆಸ್ತಿ ಬಗ್ಗೆ ಮಾತನಾಡಿದ್ದಾರೆ. ಅವರು ಮಾಡಿರುವ ಅಕ್ರಮದ ಅನೇಕ ದಾಖಲಾತಿಗಳ‌ನ್ನು ನಾನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇನೆ. 2006ರಲ್ಲಿ ಮಾಡಿದ್ದ ಸಮ್ಮಿಶ್ರ ಸರ್ಕಾರ ಸರಿಯಾಗಿದ್ದರೆ 2008ರಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅಂದು ಬೇರೆ ವ್ಯವಸ್ಥೆ ಇತ್ತು. 2018ರಲ್ಲಿ ನಮ್ಮ‌ ಮನೆಗೆ ಬಂದ್ರಿ. ಅಂದು ಅರ್ಜಿ ಹಿಡಿದುಕೊಂಡು ನಾನು ಬಂದಿರಲಿಲ್ಲ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನೀವಲ್ಲ. ಅವರನ್ನು ಕೆಳಗಡ ಇಳಿಸಿದ್ದು ಯಾಕೆ..? ಅಂದು ನಾವೂ ಮಾಡಿದ ಸರ್ಕಾರದಿಂದ ಎರೆಉ ಪಕ್ಷಗಳು ಬೆಳೆದುವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಸಹಕರಿಸಿದ್ದಾರೆ. ಅಲ್ಲಪ್ಪ ಸಿದ್ದರಾಮಯ್ಯ ನಾನೇ 10 ವರ್ಷ ಸಿಎಂ ಅಂತೀರಲ್ಲ, ಮುಂದಿನ 10 ತಿಂಗಳು ಮುಂದುವರೆಯಿರಿ ನೋಡೋಣಾ ಎಂದು ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *