ರಾಜ್ಯಾದ್ಯಂತ ಲೋಕಾಯುಕ್ತ ದಾಳಿ : ಎಲ್ಲೆಲ್ಲಿ ಧಾಳಿ ಆಗಿದೆ ಮಾಹಿತಿ ಇಲ್ಲಿದೆ

1 Min Read

ಬೆಂಗಳೂರು: ರಾಜ್ಯಾದ್ಯಂತ ಇಂದು ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ 11 ಕಡೆ ಹಾಗೂ  ಚಿತ್ರದುರ್ಗ  ಹಾಸನ, ರಾಯಚೂರು, ಕಲಬುರಗಿ, ಬೆಳಗಾವಿಯಲ್ಲೂ ದಾಳಿ ನಡೆದಿದೆ.

ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಮನೆ ಮೇಲೆ, ಅಸಿಸ್ಟೆಂಟ್ ರೆವಿನ್ಯೂ ಆಫೀಸರ್ ಚಂದ್ರಪ್ಪ ಬೀರಜ್ಜನವರ್ ಮನೆ ಮೇಲೆ ಹಾಗೂ ಚಂದ್ರಪ್ಪಗೆ ಸೇರಿದ ಬಿಬಿಎಂಪಿ ವಾರ್ಡ್ ಆರ್ ಆರ್ ನಗರದ ಆರ್ ಟಿ ಒ ಮನೆ ಮೇಲೆ, ಕೆ ಆರ್ ಪುರಂನಲ್ಲಿರುವ  ಆರ್ ಟಿ ಒ ಮನೆ ಮೇಲೂ ದಾಳಿಯಾಗಿದೆ.

 

ಹಾಸನದ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಮನೆ ಮೇಲೂ ದಾಳಿಯಾಗಿದೆ. ಹಾಸನದ ಹೊರವಲಯದಲ್ಲಿರುವ ಬೊಮ್ಮನಾಯಕನಹಳ್ಳಿ ನಾರಾಯಣ ನಿವಾಸ ಹಾಗೂ ಗೋರೂರಿನಲ್ಲಿರುವ ಕಚೇರಿ ಮೇಲೂ ದಾಳಿಯಾಗಿದೆ. ರಾಯಚೂರಿನ ನಿರ್ಮಿತಿ ಕೇಂದ್ರ, ಕ್ಯಾಷೋಟೆಕ್ ಯೋಜನಾ ನಿರ್ದೇಶಕನ ಮನೆ ಮೇಲೆ ದಾಳಿಯಾಗಿದೆ. ಶರಣಬಸವ ಪಟ್ಟೇದ್ ದಾಳಿಗೊಳಗಾದ ಅಧಿಕಾರಿ. ರಾಯಚೂರು ಲೋಕಾಯುಕ್ತ ಎಸ್ಪಿ ಡಾ. ರಾಮ್. ಎಲ್‌. ಅರಸಿದ್ದಿ ನೇತೃತ್ವದಲ್ಲಿ ದಾಳಿಯಾಗಿದೆ.
ಕಲಬುರಗಿಯಲ್ಲಿ ಎರಡು ಕಡೆ ಲೋಕಾಯುಕ್ತ ದಾಳಿಯಾಗಿದೆ. ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಹಾಗೂ ದೇವದುರ್ಗದ KBJNL ಇಇ ತಿಪ್ಪಣ್ಣ ಅನ್ನದಾನಿ ಮನೆ ಮೇಲೂ ದಾಳಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *