ಲಿಂಗಾಯತ ಸಮುದಾಯ ಹಾಗೂ ಯಡಿಯೂರಪ್ಪ ಬಗ್ಗೆ ಹೇಳಿಕೆ : ಹೊಳಲ್ಕೆರೆ ಶಾಸಕ ಚಂದ್ರಪ್ಪ ಕೂಡಲೇ ಕ್ಷಮೆಯಾಚಿಸಬೇಕು : ಅಗ್ರಹಾರ ಮಂಜುನಾಥ್

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ.30 : ಚಂದ್ರಪ್ಪ ಏನಾದರೂ  ಶಾಸಕರಾಗಿದ್ದರೆ ಅದು ಯಡಿಯೂರಪ್ಪ ಹಾಗೂ ಅವರ ಕುಟುಂಬದ ಕೃಪಾಶೀರ್ವಾದದಿಂದ ಅದನ್ನು ಅವರು ಮನಗಾಣಬೇಕೆಂದು ಹೊಳಲ್ಕೆರೆಯ ಅಗ್ರಹಾರದ ಮಂಜುನಾಥ್ ಹೇಳಿದರು.

ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಅದು ಬಿಟ್ಟು ಲಿಂಗಾಯಿತ ಸಮುದಾಯದ ಬಗ್ಗೆ ಹಾಗೂ ಯಡಿಯೂರಪ್ಪ ಅವರ ಬಗ್ಗೆ ಕೀಳಾಗಿ ಮಾತಾಡುವುದು ಸರಿಯಲ್ಲ. ಕೂಡಲೇ ಕ್ಷಮೆ ಕೇಳಬೇಕು. ಇನ್ನೂ ಗೋವಿಂದ ಕಾರಜೋಳ ಅವರು ನಿರಾತಂಕವಾಗಿ ಚುನಾವಣೆಯನ್ನು ಮಾಡಬಹುದು ನಾವು ಹೆಚ್ಚಿನ ಮತಗಳನ್ನು ಹಾಕಿಸುತ್ತೇವೆ ಎಂದರು.

ಹೊಳಲ್ಕೆರೆ ಶಾಸಕ ಚಂದ್ರಪ್ಪ ತಮ್ಮ ಚುನಾವಣೆಯನ್ನು ಮಾಡಿದ್ದಾರೆಯೇ ಹೊರೆತು ಬೇರೆ ಯಾವ ಚುನಾವಣೆಯನ್ನು ಮಾಡಿಲ್ಲ. ಇಂದು ಕೂಡ ತಮಗೆ ಬೇಕಿರುವ ಕೆಲವು ಜನರನ್ನು ಇಟ್ಟುಕೊಂಡು ಸಭೆ ಮಾಡಿದ್ದಾರೆ. ಅವರಿಗೆ ತಾಕತ್ ಇದ್ದರೆ ಅವರಿಗೆ ಗಂಡಸುತನ ಇದ್ದರೆ ಅವರು ಒಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದು ಬರಲಿ, ಎಂಎಲ್‍ಎ ನಿಗಮ ಮಂಡಳಿ ಸ್ಥಾನ ನಮಗೆ ಬೇಕು ಎಂದು  ಹೇಳುತ್ತಾರೆ.

ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಸದಸ್ಯ ಜಯಸಿಂಹ ಕಾಟ್ರೋತ್ ಮಾತನಾಡಿ ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆಯೇ ಹೊರೆತು ಸಂಘ ಸಂಸ್ಥೆ ಪಕ್ಷಗಳಿಗಾಗಿ ಚುನಾವಣೆ ಮಾಡಿಲ್ಲ ಇಂತಹ ವ್ಯಕ್ತಿ ಬಿಜೆಪಿ ಯಡಿಯೂರಪ್ಪ ಅವರ ಬಗ್ಗೆ ಮಾತಾಡುತ್ತಾರೆ. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 10 ಸದದಸ್ಯರನ್ನು ಗೆಲ್ಲಿಸಿಕೊಳ್ಳುವ ಗಂಡಸುತನವಿರಲಿಲ್ಲವೇ ?

ಸದಾನಂದಗೌಡರು ಈಶ್ವರಪ್ಪ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಅವರಿಗಿಂತ ಇವರು ದೊಡ್ಡವರಾ? ಪಕ್ಷ ಯಾರಿಗೆ ಟಿಕೇಟ್ ಕೊಟ್ಟಿದಿಯೋ ಅವರ ಪರ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪಾರ್ಟಿವಿಥ್ ಎ ಡಿಫರೆನ್ಸ್ ಗೊತ್ತಿಲ್ಲ.ಇದರಿಂದ ಈ ರೀತಿ ಮಾತಾಡುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ಬಿಜೆಪಿಯ ನಿಷ್ಠಾವಂತರ ಶಾಪ ತಟ್ಟುತ್ತದೆ. ಕೂಡಲೇ ಚಂದ್ರಪ್ಪ ಬೇಷರತ್ ಕ್ಷಮೆ ಯಾಚಿಸಿ ಬಿಜೆಪಿ ಪರವಾಗಿ ಕೆಲಸ ಮಾಡಿದರೆ ಗೌರವ ಬರುತ್ತದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಅಗ್ರಹಾರ ಬಸವರಾಜ್ ತಿಪ್ಪೇಸ್ವಾಮಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *