ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ,(ಮಾ.26) : ಸಿದ್ದರಾಮಯ್ಯ ಹತಾಶರಾಗಿದ್ದಾರೆ, ನೆಲೆ ಕಳೆದುಕೊಂಡ ಭಾವನೆ ಅವರಲ್ಲಿದೆ ಹೀಗಾಗಿ ಮನಸ್ಸಿಗೆ ಬಂದಂತೆ ನಾಲಿಗೆ ಮೇಲೆ ಹತೋಟಿ ಇಲ್ಲದೆ ಮಾತನಾಡುತ್ತಿದ್ದಾರೆ ಇದು ಕಾಂಗ್ರೆಸ್‍ಗೆ ಮಾರಕವಾಗಲಿದೆ ಎಂದು ಕೃಷಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಹಾಗೂ ನಾವು ನಮ್ಮ ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ ಆದರೆ ಕಾಂಗ್ರೆಸ್‍ನವರು ವಿವಾದ ಉಂಟು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಸಹಿಸಲು ಆಗದೆ ಅನಾವಶ್ಯಕ ವಿವಾದ ಸೃಷ್ಠಿ ಮಾಡುತ್ತಿದ್ದಾರೆ. ವಿವಾದಗಳ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವ ಸಣ್ಣ ಮನಸ್ಸು ನಮಗಿಲ್ಲ. ಬಿಜೆಪಿ ತತ್ವ ಸಿದ್ದಾಂತ ಆಡಳಿತ ವೈಖರಿ ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಎಂದರು.
ಡಿಕೆಶಿ, ಸಿದ್ಧರಾಮಯ್ಯ ನಡುವಿನ ಕಂದಕ ಹೆಚ್ಚುತ್ತಿದೆ ಸಿದ್ಧರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ
ಡಿಕೆಶಿ ತಾನೇ ಸಿಎಂ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ ಹತಾಶೆಯಿಂದ ಮಾಜಿ ಸಿಎಂ ಸಿದ್ಧರಾಮಯ್ಯ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಂದಲೇ ಹಿಜಾಬ್ ಗೊಂದಲ ಸೃಷ್ಠಿ ದೇಶದ ಇತಿಹಾಸ ಹೇಳುವ ಕಾಶ್ಮೀರ ಫೈಲ್ ಸಿನೆಮಾ ಕಂಡಮ್ ಮಾಡುವುದು ಅರ್ಥಹೀನ ಹತಾಶೆಯಿಂದ ಮುಳುಗುವ ಭೀತಿಯಲ್ಲಿ ಮನಸೋ ಇಚ್ಛೆ ಮಾತು ಒಂದು ಜಾತಿ, ಜನಾಂಗ, ಧರ್ಮ ತೆಗೆಳುವುದು ಸರಿಯಲ್ಲ ಬೇರೊಬ್ಬರಿಗೆ ನೋವಾಗುವಂತ ಹೇಳಿಕೆ ಸರಿಯಲ್ಲ ಸಿದ್ಧರಾಮಯ್ಯ ಸಿಎಂ ಆಗಿದ್ದವರು ತೂಕವಾಗಿ ಮಾತಾಡಬೇಕು ಅವರ ಮಾತುಗಳು ಅವರಿಗೇ ಮಾರಕ ಆಗಲಿವೆ ಎಂದರು.
ಯಾವುದೇ ಸಿನೆಮಾ ತೆಗೆದು ಬೇರೆ ಸಿನೆಮಾ ಹಾಕಲು ಯಾರೂ ಹೇಳಿಲ್ಲ ಪ್ರೇಕ್ಷಕರ ಡಿಮ್ಯಾಂಡಿನಂತೆ ಥೇಟರ್ ಗಳಲ್ಲಿ ಸಿನೆಮಾ ಬದಲಾಗುತ್ತವೆ ಕಾಶ್ಮೀರ ಫೈಲ್ಸ್ ಸಿನೆಮಾ ಮೊದಲ 3ದಿನ ಯಾರೂ ನೋಡಲಿಲ್ಲ ಬಳಿಕ ಜನ ಥೇಟರ್ ಗಳಲ್ಲಿ ಕಿಕ್ಕಿರಿದು ನೋಡುತ್ತಿದ್ದಾರೆ ಜೇಮ್ಸ್ ಸಿನೆಮಾ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿ ಇನ್ನು ಕಾಶ್ಮೀರಿ ಫೈಲ್ ಬಗ್ಗೆ ಮಾತನಾಡಿದ, ಅವರು ಇತಿಹಾಸ ಕುರಿತು ಬೆಳಕು ಚಲ್ಲುವುದು ತಪ್ಪಲ್ಲ, ಅಂಬೇಡ್ಕರ್, ವಾಲ್ಮೀಕಿ ಯಾವುದೇ ಫೈಲ್ ಮಾಡಿದ್ರು ತಪ್ಪಲ್ಲ, ಸತ್ಯವನ್ನಷ್ಟೆ ಜನರಿಗೆ ಹೇಳಬೇಕು, ಇದಕ್ಕೆ ಸತೀಶ್ ಜಾರಕಿ ಹೊಳಿ ವಕಾಲತ್ತು ಅಗತ್ಯವಿಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಗೆ ನಾಲ್ಕು ಸ್ಥಾನಗಳು ಖಾಲಿ ಇದೆ, ಸ್ಥಾನ ತುಂಬುವ ಕೆಲಸವನ್ನು ಸಿಎಂ ಮತ್ತು ವರಿಷ್ಠರು ಮಾಡುತ್ತಾರೆ ಶೀಘ್ರದಲ್ಲಿಯೇ ಎಲ್ಲಾ ಸ್ಥಾನಗಳು ತುಂಬಲಿವೆ ಚುನಾವಣೆಗೆ ಇನ್ನು 14 ತಿಂಗಳು ಬಾಕಿ ಇದ್ದು, ಸಚಿವ ಸ್ಥಾನ ಭರ್ತಿ ಮಾಡುತ್ತಾರೆ ಎಂದರು.