ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್, ಮೊ : 8722022817
ಚಿತ್ರದುರ್ಗ,(ಜ.10) : ನಗರದಲ್ಲಿ ಜ.14 ಮತ್ತು 15,16 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ, ಪುರುಷ ಮತ್ತು ಮಹಿಳೆಯರ ಹಾಗೂ 45 ವರ್ಷ ಮೇಲ್ಪಟ್ಟ ಪುರುಷರ ರಾಜ್ಯ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ವೀರವನಿತೆ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಗೆಳೆಯರ ಬಳಗದ ಅಧ್ಯಕ್ಷರಾದ ಮೋಹನ್ ಕುಮಾರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 15 ರಿಂದ 17 ವರ್ಷದೊಳಗಿನವರಿಗೆ ಸಿಂಗಲ್ಸ್, ಡಬಲ್ಸ್, ಪುರುಷರ ಮತ್ತು ಮಹಿಳೆಯರಿಗೆ ಡಬಲ್ಸ್ ಓಪನ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಡಬಲ್ಸ್ ಪಂದ್ಯಾವಳಿ ನಡೆಯಲಿದೆ. ಪ್ರತಿಯೊಂದರಲ್ಲಿಯೂ ಮೂರು ಬಹುಮಾನವನ್ನು ನೀಡಲಾಗುತ್ತದೆ. 14 ರಂದು ಜಿಲ್ಲಾಧಿಕಾರಿಗಳು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಜಿ.ಪಂ ಸಿಇಓ ದಿವಾಕರ್ ಭಾಗವಹಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಪರಶುರಾಮ್ ಭಾಗವಹಿಸಲಿದ್ದಾರೆ ಎಂದರು.
ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಗಳಿಂದ 160 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಈಗಾಗಲೇ 70 ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿವೆ. ಈ ಪಂದ್ಯಾವಳಿಗಾಗಿ ಯಾರಲ್ಲೂ ಸಹಾ ಹಣವನ್ನು ಕೇಳಿಲ್ಲ ಬಳಗದ ಸದಸ್ಯರೆ ಹಣವನ್ನು ಹಾಕುವುದರ ಮೂಲಕ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ನಮ್ಮ ಬಳಗದವತಿಯಿಂದ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿಯನ್ನು ಯುವಜನ ಕ್ರೀಡಾ ಇಲಾಖೆನೆರವಿನಿಂದ ನೀಡಲಾಗುತ್ತಿದೆ ಎಂದರು.
ಗೋಷ್ಟಿಯಲ್ಲಿ ಉಪಾಧ್ಯಕ್ಷರಾದ ಮಲ್ಲಿಕಾರ್ಜನ್, ನಿರ್ದೇಶಕ ಸೋಮಣ್ಣ, ಗುರು, ಸದಸ್ಯರಾದ ಕುಮಾರಸ್ವಾಮಿ, ಮದಿಷ ಭಾಗವಹಿಸಿದ್ದರು.