ರಾಜ್ಯಮಟ್ಟದ ಗಣರಾಜ್ಯೋತ್ಸವ: ಎನ್‍ಎಸ್‍ಎಸ್ ಘಟಕದ ಪಥ ಸಂಚಲನಕ್ಕೆ ಆಯ್ಕೆ

0 Min Read

ಚಿತ್ರದುರ್ಗ. ಜ.13: ರಾಜ್ಯಮಟ್ಟದ ಗಣರಾಜ್ಯೋತ್ಸವ ಎನ್‍ಎಸ್‍ಎಸ್ ಘಟಕದ ಪಥ ಸಂಚಲನಕ್ಕೆ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ದ್ವಿತೀಯ ಬಿ.ಎ ವಿದ್ಯಾರ್ಥಿ ಎನ್.ಹರೀಶ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಜನವರಿ 13 ರಿಂದ 26 ರವರೆಗೆ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಜನ ತರಬೇತಿ ಕೇಂದ್ರದಲ್ಲಿ ನಡೆಯುವ 2025-26ನೇ ರಾಜ್ಯಮಟ್ಟದ ಗಣರಾಜ್ಯೋತ್ಸವ ಎನ್‍ಎಸ್‍ಎಸ್ ಘಟಕದ ಪಥ ಸಂಚಲನಕ್ಕೆ ಆಯ್ಕೆಯಾಗಿದ್ದಾರೆ.

 

ಈ ವಿದ್ಯಾರ್ಥಿಗೆ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ವಿ.ಪ್ರಸಾದ್, ಬಿ.ಕೆ.ಬಸವರಾಜ ಸೇರಿದಂತೆ ಅಧ್ಯಾಪಕರು-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Share This Article