Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಳೆ ರಾಜ್ಯ ಮಟ್ಟದ ಶೋಷಿತರ ಜಾಗೃತಿ ಸಮಾವೇಶ : 5 ಲಕ್ಷ ಜನ ಸೇರುವ ನಿರೀಕ್ಷೆ  : ಕೆ.ಎಂ.ರಾಮಮದ್ರಪ್ಪ ಹೇಳಿಕೆ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ. ಜನವರಿ.27  : ನಾಳೆ ನಡೆಯಲಿರುವ  ಶೋಷಿತ ಸಮುದಾಯಗಳ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರುಗಳು ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆಎಂ ರಾಮಚಂದ್ರಪ್ಪ ತಿಳಿಸಿದರು.

ನಗರದ ಹೊರವಲಯದ ಸಮಾವೇಶ ನಡೆಯುವ ಸ್ಥಳದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾವೇಶದಲ್ಲಿ ಸಿಎಂ ಡಿಸಿಎಂ, ಶೋಷಿತ ಸಮುದಾಯದ ಹಾಲಿ, ಮಾಜಿ ಸಚಿವರು, ಶಾಸಕರು ಸೇರಿದಂತೆ ರಾಜ್ಯದ ಪ್ರತೀ ಮೂಲೆ ಮೂಲೆಗಳಿಂದ ಜನತೆ, 10 ಸಾವಿರಕ್ಕೂ ಹೆಚ್ಚು ವಾಹನಗಳಲ್ಲಿ ಜನ ಬರುವ ನಿರೀಕ್ಷೆ ಇದೆ ಎಂದರು.

ಕಾರ್ಯಕ್ರಮಕ್ಕೆ 5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, 3 ಲಕ್ಷ ಜನತೆಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ವೇದಿಕೆ‌ ಮೇಲೆ 200 ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದ್ದು, 3 ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಿದೆ. ಸಮಾವೇಶಕ್ಕೆ‌ ಬರುವವರಿಗೆ ವೆಜ್ ಮತ್ತು ನಾನ್ ವೆಜ್ ಊಟ ಸಿದ್ದಪಡಿಸಲಾಗುತ್ತಿದೆ.

ಈ ಸಮಾವೇಶದ ತರುವಾಯ ಶೋಷಿತರು ನಿರ್ಣಯ, ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಶೋಷಿತ ಸಮುದಾಯದ ಜನರಲ್ಲಿ ಜಾಗೃತಿ ಇಲ್ಲ, ಮೇಲ್ವರ್ಗದ ಜನರ ಗುಲಾಮಗಿರಿಗೆ ಒಳಗಾಗಿದ್ದಾರೆ. ಶೋಷಿತರನ್ನು ಗುಲಾಮಗಿರಿಯಿಂದ ಹೊರತರಬೇಕಾಗಿದೆ ಎಂದರು.

ಎಂಪಿ ಚುನಾವಣೆಗೆ ಪ್ರತಿಕ್ರಿಯೆ : ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ  ಸಮಾವೇಶ ಆಯೋಜನೆ ಮಾಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಕೆಲವರು ತಾವೇ ಸರಕಾರ ಮಾಡುವುದಾಗಿ ಹೇಳಿದ್ರು, ರಾಜ್ಯದಲ್ಲಿ‌ ನಾವೂ ಇದೀವಿ ಅಂತಾ ಅವರಿಗೆ ತೋರಿಸಬೇಕು.

ಜಾತಿ ಜನಗಣತಿ ವರದಿ‌ ಜಾರಿ ಮುಖ್ಯ ಉದ್ದೇಶ ನಮ್ಮ‌ಜಾತಿ ಸದಸ್ಯರ ಸಂಖ್ಯೆ ನಿಖರವಾಗಿ ಮಮಗೆ ಗೊತ್ತಾಗಬೇಕು. ಹಾಗಾಗಿ ಕಾಂತರಾಜ ವರದಿ ತ್ವರಿತವಾಗಿ ಜಾರಿ ಆಗಬೇಕು ಎಂದರು. ಸಮಾವೇಶ ಮೂಲಕ ಜಾರಿ ಆಗಬೇಕು ಅಂತಾ ಒತ್ತಡ ಹಾಕಲಾಗುವುದು. ದೇಶದಲ್ಲಿ ಸಂಪತ್ತು ಕೆಲವೇ ಕೆಲವು ಮೇಲ್ಜಾತಿಗಳಿಗೆ ಜಾತಿಗೆ ಸೀಮಿತವಾಗಿದೆ. ಕಾಂತರಾಜ್ ವರದಿ ಜಾರಿಯಾದ್ರೆ ಕೆಲವರಿ ಯಾಕೆ ನೋವು…? ಕಾಂತರಾಜ್ ವರದಿ ಜಾರಿ ಆಗಲೇಬೇಕು ಅಂತಾ ಒತ್ತಾಯ ಮಾಡ್ತೀವಿ ಎಂದರು.

ಕೆಲವರು ಕಾಂತರಾಜ್ ವರದಿ ಕಳುವಾಗಿದೆ ಅಂತಿದಾರೆ. ಮಾಜಿ ಸಿಎಂ ಒಬ್ಬರು ಕಳುವಾಗಿದೆ ಅಂತಾ ಹೇಳಿದ್ದಾರೆ. ಆದ್ರೆ ನಮಗೆ ಅವರ ಮೇಲೇ ಸಂಶಯ ಇದೆ. ಎಲ್ಲಾ ಪಕ್ಷಗಳ ನಾಯಕರಿಗೂ ಸಮಾವೇಶಕ್ಕೆ ಆಹ್ವಾನ ಕೊಟ್ಟಿದೀವಿ, ಆದ್ರೆ ಅವರಿಗೆ ಬರೋಕೆ ಭಯ ಇರಬಹುದು
ವಿರೋಧ ಪಕ್ಷದವರೆಲ್ಲ‌ ನಾವೂ ಬೆಂಬಲ ಕೊಡ್ತೀವಿ ಅಂದಿದ್ದಾರೆ. ನಾವು ಯಾವುದೇ ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿಲ್ಲ. ಸಂಘಟನೆಗಳಿಂದ ನಾವಿಂದು ಹೋರಾಟ ಮಾಡುತ್ತಿದ್ದೇವೆ ಎಂದರು.

ಚುನಾವಣೆಗೂ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ, ಈಗಾಗಲೇ ರಾಜ್ಯಾದ್ಯಂತ ಓಡಾಡಿ ಶೋಷಿತರ ಸಂಘಟನೆ ಬಲಪಡಿಸಿದ್ದೇವೆ, ಸರ್ಕಾರದ ಸಂಪುಟ ಸಹೋದ್ಯೋಗಿಗಳು ವರದಿ ಸ್ವೀಕಾರದ ಬಗ್ಗೆ ನಕಾರ ಮಾಡ್ತಿದ್ದಾರೆ. ಹಾಗಾಗಿ ಅವರಿಗೂ ಚುರುಕು ಮುಟ್ಟಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಒಂದು ವೇಳೆ ವರದಿ ಸ್ವೀಕಾರಕ್ಕೆ ಇಷ್ಟ ಇರದಿದ್ರೆ ಸಮಾವೇಶದಲ್ಲಿ ಸ್ಪಸ್ಟಪಡಿಸಲಿ ಎಂದು ಆಗ್ರಹಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!