ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 29 : ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ದುರ್ಗಾ ಇಲೆವೆನ್ ಕ್ರಿಕೇಟರ್ಸ್ ಚಿತ್ರದುರ್ಗ ಇವರ ವತಿಯಿಂದ 3ನೇ ಬಾರಿಗೆ ಮದಕರಿ ಕಪ್- 2024 ಲೀಗ್ ಕಮ್ ನಾಕೌಟ್ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಹೊನಲು-ಬೆಳಕಿನ ಕ್ರಿಕೆಟ್ ಟೂರ್ನಮೆಂಟನ್ನು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಆಳ್ವಿಕೆ ನಡೆಸಿ ಸುಪ್ರಸಿದ್ದಿ ಪಡೆದ ಮದಕರಿನಾಯಕನ ಹೆಸರಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ನಡೆಸುತ್ತಿರುವದು ನಮ್ಮೆಲ್ಲರುಗೂ ಹೆಮ್ಮೆಯ ವಿಚಾರವಾಗಿದೆ.
ರಾಜ್ಯದ ನಾನಾ ಭಾಗಗಳಿಂದ 40 ಕ್ಕೂ ಹೆಚ್ಚು ತಂಡ ಭಾಗವಹಿಸಿದ್ದು ಎಲ್ಲಾ ತಂಡಗಳಿಗೂ ಶುಭವಾಗಲಿ ಎಲ್ಲಾರೂ ಪ್ರೀತಿಯಿಂದ ಆಟವಾಡಬೇಕು ಮತ್ತು ಕ್ರಿಕೆಟ್ ಯುವಕಲ್ಲಿ ಹೆಚ್ಚು ಆಕರ್ಷಣೆ ಮಾಡಿದ ಕ್ರೀಡೆಯಾಗಿದೆ.
ಚಿತ್ರದುರ್ಗ ನಗರದಲ್ಲಿ ರಣಜಿ, ಟಿ20 ಕ್ರಿಕೆಟ್ ಯಾವುದೇ ಕಮ್ಮಿ ಇಲ್ಲದಂತೆ ಈ ಕ್ರೀಡಾಂಗಣದಲ್ಲಿ ಮೂರನೇ ಬಾರಿಯ ಟೆನಿಸ್ ಬಾಲ್ ಕ್ರಿಕೆಟ್ ನಡೆಯುತ್ತಿದ್ದು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣ ಸುತ್ತ ಕ್ರೀಡೆಯ ಸವಿಯನ್ನು ಸವಿಯುತ್ತಿರುವುದು ನೋಡಲು ಎರಡು ಕಣ್ಣು ಸಾಲುತ್ತಿಲ್ಲ ಎಂದರು.
ಕ್ರೀಡಾಪಟುಗಳು ದ್ವೇಷ, ಅಸೂಯೆಯಂತಹ ಭಾವನೆಗಳನ್ನು ಬದಿಗೊತ್ತಿ ಸ್ನೇಹದಿಂದ ಕ್ರೀಡೆಯನ್ನು ಎದುರಿಸಬೇಕು ಹಾಗೂ ನಿರ್ಣಾಯಕರ ನಿರ್ಣಯಕ್ಕೆ ತಲೆ ಬಾಗಬೇಕ.
ಕ್ರೀಡೆಗಳು ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ದೃಹಿಕವಾಗಿ ಸದೃಢರಾಗುತ್ತಾರೆ ಎಂದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ ರಾಜ್ಯದ ನಾನಾ ಭಾಗಗಳಿಂದ ಕ್ರೀಡಾ ಸ್ಫೂರ್ತಿಯಿಂದ ಆಟವಾಡಬೇಕು. ಕ್ರೀಡೆಯನ್ನು ಯಾರು ಪ್ರೀತಿಯಿಂದ ಆಡುತ್ತಾರೆ ಅವರಿಗೆ ಗೆಲುವಾಗುತ್ತದೆ. ಮದಕರಿ ನಾಯಕನ ಹೆಸರಲ್ಲಿ ಪಂದ್ಯ ಆಯೋಜನೆ ಮಾಡಿರುವುದು ಸಂತೋಷದ ವಿಚಾರವಾಗಿದ್ದು ಮುಂದಿನ ದಿನದಲ್ಲಿ ಸಹ ಇಂತಹ ಕ್ರೀಡೆಗಳು ಜರುಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮದಕರಿ ಕಪ್ ಆಯೋಜಕರಾದ ಸ್ನೇಹಜೀವಿ ಸೂರಪ್ಪ, ರಾಜೀವ್, ರಾಮು,ನಾಗರಾಜ್ ಮತ್ತು ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಕಾಂಗ್ರೆಸ್ ಮುಖಂಡ ಅಂಜಿನಪ್ಪ, ರಾಜೇಶ್, ಅಹೋಬಕ ಟಿವಿಎಸ್ ಅರುಣ್ ಕುಮಾರ್, ಫಾರುಕ್ ಇತರರಿದ್ದರು.