ಜನವರಿ 21ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸರ್ವಧರ್ಮೀಯ  ವಧು ವರರ ಸಮಾವೇಶ

1 Min Read

 

 

ಚಿತ್ರದುರ್ಗ, ಜ, 16, ಚಿತ್ರದುರ್ಗದ ಬಸವೇಶ್ವರ ವಧು ವರರ ಮಾಹಿತಿ ಕೇಂದ್ರದ ವತಿಯಿಂದ ರಾಜ್ಯಮಟ್ಟದ ಸರ್ವಧರ್ಮ ವಧು ವರರ ಸಮಾವೇಶವನ್ನು ಇದೇ ತಿಂಗಳ 21ರಂದು  ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಕೇಂದ್ರದ ಸಂಚಾಲಕ ಹಾಗೂ ವ್ಯವಸ್ಥಾಪಕರೂ ಆದ ಜೆ.ಎಂ. ಜಂಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ತಿಂಗಳ 22ನೇ ತಾರೀಕು ಬೆಳಿಗ್ಗೆ 11ಗಂಟೆಗೆ ಭಾನುವಾರ ಬೆಂಗಳೂರಿನ ಗಾಂಧಿನಗರದ, ಎರಡನೇ ಮುಖ್ಯ ರಸ್ತೆಯಲ್ಲಿರುವ ಮಹಾರಾಷ್ಟ್ರ ಮಂಡಳದ ಸಭಾಂಗಣದಲ್ಲಿ ನಡೆಯಲಿದೆ.  ಸಮಾವೇಶದ ದಿವ್ಯ ಸಾನಿಧ್ಯವನ್ನು ಬೆಂಗಳೂರು ಸರ್ಪ ಭೂಷಣ ಶಿವಯೋಗಿಗಳ ಮಠದ  ಶ್ರೀ ಮಲ್ಲಿಕಾರ್ಜುನ  ಮಸ್ವಾಮಿಗಳವರು ಹಾಗೂ ಬೆಳಗಾವಿ ಜಿಲ್ಲೆ ಶಿರಸಂಗಿ ಮಹಲಿಂಗೇಶ್ವರಮಠದ ಶ್ರೀಬಸವ ಮಹಾಂತ ಮಹಾಸ್ವಾಮಿಗಳು ವಹಿಸಲಿದ್ದಾರೆಂದು ತಿಳಿಸಿದ್ದಾರೆ.

ಈ ಮಾಹಿತಿ ಕೇಂದ್ರವು ಕಳೆದ 1996-97ನೇ ಇಸವಿಯಿಂದ ಪ್ರಾರಂಭಗೊಂಡು ಇಲ್ಲಿಯವರೆಗೂ ಇಂತಹ ಸಮಾವೇಶಗಳನ್ನು ರಾಜ್ಯದ ವಿವಿಧಡೆ ನಡೆಸಿ ಹಲವರಿಗೆ  ಸಹಕಾರಿಯಾಗಿದೆ ಎಂದಿರುವ ಅವರು ಒಂದು ಜಾತಿ,
,ಜನಾಂಗ, ಧರ್ಮದವರಿಗೆ ಮಾತ್ರ  ಸೀಮಿತವಾಗಿರದೆ ಎಲ್ಲರನ್ನೊಳಗೊಂಡ ವಧು ಹಾಗೂ ವರರ, ಪರಸ್ಪರ, ಭೇಟಿ ಚರ್ಚೆ ನಡೆದು ಮುಂದೆ ಒಪ್ಪಿಕೊಂಡು ಕಲ್ಯಾಣ ಮಹೋತ್ಸವಗಳು ನಡೆಯಲು ಒಂದು ವೇದಿಕೆಯಾಗಿದೆ. ಎಷ್ಟೋ ಮದುವೆಗಳು ಈಗಾಗಲೇ ನಡೆದಿವೆ.ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮನವಿ ಮಾಡಿದ್ದಾರೆ.

ಹೆಚ್ಚಿನ‌ ಮಾಹಿತಿಗಾಗಿ ಜೆ.ಎಂ.ಜಂಬಯ್ಯ, ಸಂಚಾಲಕರು, ಮೊಬೈಲ್ 9980658625 ಸಂಪರ್ಕಿಸಲು ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *