ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಮಂಗಳೂರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತನಿಖೆ ಸರಿಯಾದ ರೀತಿಯಲ್ಲಿ ನಡೆಸುವಂತೆ ಒತ್ತಾಯ ಕೇಳಿ ಬಂದಿತ್ತು. ಇದೀಗ ಪ್ರವೀಣ್ ನೆಟ್ಟಾರು ಹತಚಯೆ ಕೇಸನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿರುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಸಿಎಂ ಬೊಮ್ಮಾಯಿ, ಪ್ರವೀಣ್ ಹತ್ಯೆ ಕೇಸ್ ವ್ಯವಸ್ಥಿತ ಪ್ರಕರಣ ಹಾಗೂ ಅಂತರಾಜ್ಯ ಕೈವಾಡವಿರುವ ಕಾರಣ ಎನ್ಐಎಗೆ ಹಸ್ತಾಂತರ ಮಾಡಲು ಪತ್ರ ಬರೆಯಲು ಸೂಚಿಸಿದ್ದೇವೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇನೆ. ಈ ಸಂಬಂಧ ಡಿಜಿ, ಯುಜಿ ಅವರೊಂದಿಗೂ ಚರ್ಚೆ ಮಾಡಿದ್ದೇನೆ.
ರಾತ್ರಿ ಗಸ್ತನ್ನು ಹೆಚ್ಚು ಮಾಡುವ ಬಗ್ಗೆಯೂ ಸೂಚನೆ ನೀಡಲಾಗಿದೆ. ಗೃಹ ಸಚಿವಾಲಯ ಕೂಡ ಈ ಸಂಬಂಧ ಅಗತ್ಯ ಸಂವಹನ ನಡೆಸುತ್ತದೆ. ಕೇರಳದ ಗಡಿ ಪ್ರದೇಶದಲ್ಲಿ ಸಂಪೂರ್ಣವಾಗಿ ಚೆಕ್ ಪೋಸ್ಟ್ ಮತ್ತು ಗಡಿ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ. ಪ್ರಮುಖ ಸಂಪರ್ಕ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕ್ಯಾಂಪ್ ಹಾಕಲಾಗುತ್ತದೆ ಎಂದಿದ್ದಾರೆ.