ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಮೀಸಲಾತಿಗಾಗಿ ಹಲವು ಸಮುದಾಯಗಳು ಹೋರಾಟ ಮಾಡುತ್ತಿವೆ. ಚುನಾವಣಾ ಹೊತ್ತಲ್ಲೂ ಕೂಡ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು. ಸಮುದಾಯದವರನ್ನು ಸಮಾಧಾನ ಮಾಡಲು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮೀಸಲಾತಿ ನೀಡುವ ಬಗ್ಗೆ ಭರವಸೆಯನ್ನು ನೀಡಿದ್ದರು. ಜೊತೆಗೆ ಮುಸ್ಲಿಂ ಸಮುದಾಯಕ್ಕಿರುವ ಮೀಸಲಾತಿಯನ್ನು ರದ್ದು ಪಡಿಸುವ ಯೋಜನೆಯ ಬಗ್ಗೆಯೂ ಮಾತನಾಡಿದ್ದರು.

ಮೀಸಲಾತಿ ರದ್ದತಿಗೆ ಸಂಬಂಧಪಟ್ಟಂತೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಾತನಾಡಿದ್ದು, ಶೇಕಡ 4ರಷ್ಟಿರುವ ಮೀಸಲಾತಿಯನ್ನು ರದ್ದು ಪಡಿಸುವುದು ಕಾನೂನು ಬಾಹಿರ ಎಂದು ತಿಳಿಸಿದೆ.ರಾಜ್ಯ ಸರ್ಕಾರದ ಮೀಸಲಾತಿ ರದ್ದತಿಗೆ ಪರಿಷ್ಕರಣೆಯ ಆದೇಶ ಪ್ರಶ್ನಿಸಿ, ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೀಸಲಾತಿ ರದ್ದು ವಿಚಾರ ಸಂಪೂರ್ಣವಾಗಿ ಊಹೆಯಿಂದ ಕೂಡಿದೆ. ಒಕ್ಕಲಿಗ, ಲಿಂಗಾಯತ ಮೀಸಲಾತಿ ಕೂಡ ದೋಷಪೂರಿತವಾಗಿದೆ. ಏಪ್ರಿಲ್ 18ರವರೆಗೆ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದಾಗಬಾರದು ಎಂದು ಸೂಚನೆ ನೀಡಿದೆ.

