ಬೆಂಗಳೂರು: ಆದ್ಯತೆಯ ಹೊಸ ಪಡಿತರ ಕಾರ್ಡ್ ವಿಸ್ತರಿಸಲು ರಾಜ್ಯ ಸರ್ಕಾರ ಅಸ್ತು ಎಂದಿದೆ. ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಅರ್ಜಿ ಸಲ್ಲಿಸಿ ಎರಡ್ಮೂರು ವರ್ಷದಿಂದಾನು ಕಾಯುತ್ತಿದ್ದವರಿಗೆ ಸಿಹಿಬಸುದ್ದಿ ನೀಡಿದೆ.
ಆಗಸ್ಟ್ ಅಂತ್ಯದವರೆಗೂ ಸುಮಾರು 2,77,662 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 1,55,927 ಅರ್ಜುಗಳು ಪುರಸ್ಕೃತಗೊಂಡಿದ್ದು, ಅವರಿಗೆಲ್ಲಾ ಹೊಸದಾಗಿ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಇನ್ನು ಇಲಾಖೆ ಹೊರಡಿಸಿರುವ ಆದೇಶದಲ್ಲಿ ಕಾರ್ಡ್ ವಿಸ್ತರಣೆಯಾಗುವಾಗ ರಾಜ್ಯ ಸರ್ಕಾರ ಸೂಚಿಸಿರುವ ಮಾನದಂಡದ ಕಾನೂನುಗಳು ಇರಲೇಬೇಕೆಂದು ಸೂಚನೆ ನೀಡಿದೆ.
ಬಿಪಿಎಲ್ ಕಾರ್ಡ್ ಹಂಚಿಕೆ ವೇಳೆ ಸರಿಯಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಬೇಕೆಂದು ತಿಳಿಸಿದ್ದಾರೆ. ಇನ್ನು ಬಿಪಿಎಲ್ ಕಾರ್ಡ್ ಗಾಗಿ ಜನ ಸುಮಾರು ಮೂರು ವರ್ಷಗಳಿಂದಾನು ಕಾಯುತ್ತಿದ್ದಾರೆ. ಹೀಗಾಗಿ ಈ ಬಾರಿ ಹೊಸದಾಗಿ ಹಂಚಿಕೆ ಮಾಡುವಾಗ ಮೊದಲು ಮೂರು ವರ್ಷದಿಂದ ಕಾಯುತ್ತಿರುವವರಿಗೆ ಆದ್ಯತೆ ನೀಡಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.