5 ವರ್ಷದಲ್ಲಿ ರಾಜ್ಯ ಸರ್ಕಾರ ಸಾಲ 10 ಲಕ್ಷ ಕೋಟಿಗೆ ಏರಲಿದೆ : ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

1 Min Read

ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದು ಹಾಸನಾಂಬೆ ದರ್ಶನ ಪಡೆದು, ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ‌. ಇನ್ನೂ ಐದು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದರೆ ಸಾಲ ಜಾಸ್ತಿಯಾಗುತ್ತದೆ. ಐದು ವರ್ಷದಲ್ಲಿ ಹತ್ತು ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಬಹುದು ಎಂದಿದ್ದಾರೆ.

 

ವಿಶ್ವಮಾನ್ಯತೆ ಪಡೆದ ನಮ್ಮ ವಿತ್ತ ತಜ್ಞರು, ನಮ್ಮ ಮುಖ್ಯಮಂತ್ರಿಗಳು. ಅವರ ಸರ್ಕಾರದಲ್ಲಿಯೇ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಾಗಿದೆ. ರಾಜ್ಯ ಆರ್ಥಿಕವಾಗಿ ಅಪಾಯದ ಪರಿಸ್ಥಿತಿ ಎದುರಿಸುತ್ತಿದೆ. ಅಸಮರ್ಪಕ ನಿರ್ವಹಣೆಯಿಂದ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದ ಸುಳಿಗೆ ಸಿಲುಕಿಸುವ ಅಪಾಯವಿದೆ ಎಂದಿದ್ದಾರೆ. 135 ಸ್ಥಾನ ಸಿಕ್ಕಿದರು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೆ ವೇಳೆ ಗ್ಯಾರಂಟಿ ಬಗ್ಗೆ ಮಾತನಾಡಿ, ಒಂದು ಗ್ಯಾರಂಟಿ ಜಾರಿಯಾಗಿಲ್ಲ. ಜಾರಿಯಾಗಿರುವ ಗ್ಯಾರಂಟಿಗಳಿಂದ ಜನರಿಗೆ ಉಪಯೋಗವಾಗುತ್ತಿಲ್ಲ. ಪ್ರಚಾರದಲ್ಲಿ ಈ ಸರ್ಕಾರ ಕಾಲ ಕಳೆಯುತ್ತಿದೆ. ಹಾಸನದಲ್ಲಿ ಗೃಹಲಕ್ಷ್ಮೀ ಯೋಜನೆ ಹಾಸನದಲ್ಲಿ 90% ಮಹಿಳೆಯರಿಗೆ ತಲುಪಿಲ್ಲ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಮಾತ್ರ ಕಾಣುವುದು ಎಂದು ಹೇಳುವ ಶಿವಲಿಂಗೇಗೌಡ ಅವರ ಅರಸೀಕೆರೆ ಕ್ಷೇತ್ರದಲ್ಲಿಯೇ ಈ ಯೋಜನೆ ತಲುಪಿಲ್ಲ ಎಂದು ಸ್ವತಃ ಸಿಎಂ ಅವರೇ ಚರ್ಚೆ ನಡೆಸಿದ್ದಾರೆ. ಈ ಗ್ಯಾರಂಟಿಗಳ ಹಣೆಬರಹ ಏನಾಗಿದೆ ಎಂಬುದು ಇದರಿಂದಾನೇ ತಿಳಿಯುತ್ತದೆ. ಶಕ್ತಿ ಯೋಜನೆಗೆ ಹಣ ಒದಗಿಸಬೇಕಾದ ಜವಬ್ದಾರಿ ಸರ್ಕಾರದ ಮೇಲಿದೆ. ಆದರೆ ಈಗಾಗಲೇ ಹಣವೆಲ್ಲಾ ಸ್ವಾಹವಾಗಿದೆ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *