ಬೆಂಗಳೂರು: ಅಪ್ಪು ಅಭಿಮಾನಿಗಳ ಆಕಾಶದೆತ್ತರದ ಕನಸಿತ್ತು. ತೆರೆ ಮರೆಯಲ್ಲೇ ಅದೆಷ್ಟೋ ಸೇವೆ ಮಾಡಿದ ಅಪ್ಪುಗೆ ಹಲವಾರು ಪ್ರಶಸ್ತಿಗಳು ಬರಬೇಕೆಂದುಕೊಂಡಿದ್ದರು. ಇದೀಗ ಅಪ್ಪು ಇಲ್ಲದ ಸಮಯದಲ್ಲಿ ಅಭಿಮಾನಿಗಳ ಆಸೆ ಈಡೇರಿದೆ. ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡಲಾಗಿದೆ.
ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಪ್ಪುಗಾಗಿ ಪುನೀತ್ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡುತ್ತಾ, ಅಪ್ಪುಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಎಉವುದಾಗಿ ಘೋಷಣೆ ಮಾಡಿದ್ದಾರೆ.
ಪುನೀತ್ ನನ್ನು ನಾನು ಬಾಲ್ಯದಿಂದಲೇ ಬಲ್ಲೆ. ಬಾಲಕನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಮೊದಲ ಬಾಲ ನಟ ಪುನೀತ್. ಸಣ್ಣ ವಯಸ್ಸಿನಲ್ಲೇ ಅಷ್ಟು ಅದ್ಭುತವಾಗಿ ನಟಿಸೋದು ಅಷ್ಟು ಸುಲಭವಲ್ಲ ಎಂದು ಸಿಎಂ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಪುನೀತ್ ರನ್ನು ಹೊಗಳಿದರು.
ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಸ್ಥಾಪಿಸಲಾಯಿತು. ಈವರಗೆ ಕೇವಲ ಎಂಟು ಮಂದಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಮರಣೋತ್ತರವಾಗಿ ಈ ಪ್ರಶಸ್ತಿ ಪಡೆಯುತ್ತಿರುವ ಪುನೀತ್ ರಾಜ್ಕುಮಾರ್ ಈ ಗೌರವಕ್ಕೆ ಪಾತ್ರರಾದ 9ನೇ ವ್ಯಕ್ತಿಯಾಗಿದ್ದಾರೆ.