ಮಾರ್ಚ್ 6ಕ್ಕೆ ರಾಜ್ಯ ಬಜೆಟ್

2 Min Read

ಬೆಂಗಳೂರು: ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯಲ್ಲೂ ದಾಖಲೆ ಬರೆಯುವುದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಬಜೆಟ್ ಮಂಡನೆ ಮಾಡುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಾರ್ಚ್ 6ಕ್ಕೆ ಬಜೆಟ್ ಮಂಡನೆ ಮಾಡಲು ದಿನಾಂಕ ಕೂಡ ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಮಾರ್ಚ್ 6 ರಂದು ಬಜೆಟ್ ಮಂಡನೆ ಮಾಡಿದರೆ ಮಾರ್ಚ್ 5 ರಿಂದ ಬಜೆಟ್ ಅಧಿವೇಶನ ಶುರುವಾಗುತ್ತೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದ ನಡುವೆಯೂ ಸಿದ್ದರಾಮಯ್ಯ ದಾಖಲೆ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. 16 ಬಜೆಟ್‌ಗಳನ್ನ ಈಗಾಗಲೇ ಮಂಡಿಸಿದ್ದು, ಮಾರ್ಚ್‌ 6ರಂದು ಮಂಡಿಸುವ ಬಜೆಟ್‌ 17ನೇ ಬಜೆಟ್‌ ಆಗಲಿದೆ. ಇನ್ನೂ 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರ ಭಾನುವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳನ್ನ ನೀಡಿದೆ. ವಿಪಕ್ಷಗಳಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ ಅಂತಿದ್ದಾರೆ. ಖಜಾನೆ ಖಾಲಿ ಆಗಿದೆ ಎಂಬ ಮಾತನ್ನ ಹೇಳ್ತಿದ್ದಾರೆ. ಹೀಗಿರುವಾಗ ಬಜೆಟ್ ಮಂಡನೆಯಲ್ಲಿ ಏನನ್ನ ನಿರೀಕ್ಷೆ ಮಾಡೋದು ಅಂತ ವಿಪಕ್ಷಗಳು ಹೇಳಿದ್ರು, ಕಾಂಗ್ರೆಸ್ ನಾಯಕರು ಈಗಾಗಲೇ ಎರಡು ಸಲ ಒಳ್ಳೆಯ ಬಜೆಟ್ ಮಂಡನೆ ಮಾಡಿದ್ದೇವೆ. ಈ ಬಾರಿಯೂ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡನೆ ಮಾಡಲಾಗುವುದು ಎಂಬ ಭರವಸೆ ಇದೆ. ಅದರಲ್ಲೂ ರೈತರು ಸಿದ್ದರಾಮಯ್ಯ ಸರ್ಕಾರದಲ್ಲಿ ಇನ್ನಷ್ಟು ಒಳ್ಳೆಯ ಯೋಜನೆಗಳ ಬಗ್ಗೆ ನಿರೀಕ್ಷೆ ಮಾಡುತ್ತಾ ಇದ್ದಾರೆ. ಮಾರ್ಚ್ 6ಕ್ಕೆ ಯಾವ್ಯಾವ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಏನೇನು ಕೊಟ್ರು ಎಂಬುದನ್ನ ನೋಡಬೇಕಿದೆ.

Share This Article
Enable Notifications OK No thanks