ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಏ.4 ರ ಗಡುವು..!

2 Min Read

ಚಿತ್ರದುರ್ಗ : 2022 ನೇ ಸಾಲಿನ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ನಾಮನಿರ್ದೇಶನಗಳನ್ನು ಆನ್ ಲೈನ್ ಮೂಲಕ ಏಪ್ರಿಲ್ 4 ರೊಳಗೆ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಸರ್ವೋತ್ತಮ ಸೇವಾ ಪ್ರಶಸ್ತಿಯು ಎರಡು ಹಂತಗಳ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸ ಬಯಸುವವರು ಪ್ರತ್ಯೇಕವಾಗಿ ನಾಮನಿರ್ದೇಶನ ಸಲ್ಲಿಸತಕ್ಕದ್ದು.

ನಾಮನಿರ್ದೇಶನವನ್ನು ಸಲ್ಲಿಸ ಬಯಸುವವರು ಜಾಲತಾಣ
Https://dparar.karnataka.gov.in/

ಅಥವಾ

Https://sarvottama awards.karnataka.gov.in ದ ಮೂಲಕ ಸಲ್ಲಿಸುವುದು.

ಪ್ರತಿ ವರ್ಷ “ನಾಗರೀಕ ಸೇವಾ ದಿನಾಚರಣೆ” ಯಂದು ಅಂದರೆ ಏಪ್ರಿಲ್, 21 ರಂದು “ರಾಜ್ಯ ಸರ್ಕಾರಿ ನೌಕರರ” ದಿನಾಚರಣೆಯನ್ನಾಗಿ ಆಚರಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಈ ಪ್ರಶಸ್ತಿಗಳನ್ನು ಎ, ಬಿ, ಸಿ, ಮತ್ತು ಡಿ ವೃಂದದ ಖಾಯಂ ಸರ್ಕಾರಿ ನೌಕರರಿಗೆ ಕೆಳಕಂಡ ಕೆಲಸಗಳಿಗಾಗಿ ನೀಡಲಾಗುವುದು.

ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಯನ್ನು ತರುವ ಮೂಲಕ ನಾಗರಿಕರಿಗೆ ಗುಣಮಟ್ಟದ ಸೇವೆಯನ್ನು ನೀಡುವುದು, ನಾಗರಿಕ ಸೇವಾ ವ್ಯವಸ್ಥೆಯಲ್ಲಿ ಗುಣಾತ್ಮಕ, ನಾಗರಿಕ ಸ್ನೇಹಿ ಮತ್ತು ಭ್ರಷ್ಟಾಚಾರ ರಹಿತ ವಾತಾವರಣ ನಿರ್ಮಾಣ, ಮಾಡಿ ಮೌಲ್ಯವರ್ಧಿತ ಸೇವೆ, ವೃದ್ಧಿ, ಮುಂದಾಳತ್ವ ಮತ್ತು ಚಲನಶೀಲಗಳ ರಚನೆಮಾಡಿ ನಾಗರಿಕರ ಅವಶ್ಯಕತೆಗನುಗುಣವಾಗಿ ವಿನೂತನ ಪದ್ದತಿ ಅಳವಡಿಸುವುದು.

ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅತ್ಯುನ್ನತ ಕಾರ್ಯನಿರ್ವಹಣೆ, ಸಹಜ ಕಾರ್ಯ ನಿರ್ವಹಣೆಯೊಂದಿಗೆ ನಾಗರಿಕರಿಗೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೀತಿಯ ಸೇವೆಗಳನ್ನು ಒದಗಿಸಿದಂತಹ ನೌಕರರನ್ನು ಮತ್ತು ಕಛೆರಿ ವ್ಯವಸ್ಥೆ ಪರಿಸರದಲ್ಲಿ ವಿಶೇಷ ವಿಭಿನ್ನ ಸಾಧನೆಯನ್ನು ಮಾಡಿರುವುದು.

ಇಲಾಖೆಯ/ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತಂದು ಅದ್ಭುತವಾದ ರೀತಿಯಲ್ಲಿ ಗಣನೀಯ ಕಾರ್ಯನಿರ್ವಹಣೆ, ವಿನೂತನೆಯನ್ನು ಕಾರ್ಯರೂಪಕ್ಕೆ ತರುವುದು ಮತ್ತು ರಚನಾತ್ಮಕ ರೀತಿಯಲ್ಲಿ ಮುಂದಾಳತ್ವ ವಹಿಸುವಿಕೆ, ನಾಗರಿಕರಿಗೆ ಗಮನಾರ್ಹ ಸುಧಾರಣೆಯನ್ನು ಮಾಡುವುದು, ದೀರ್ಘ ಸಮಯದ ಫಲಿತಾಂಶ ಸಾಧನೆ, ನಿಗದಿತ ಫಲಿತಾಂಶ ಸಾಧನೆಗೆ ಸರಳೀಕೃತ ಕಾರ್ಯ ವಿಧಾನ ವ್ಯವಸ್ಥೆ. ಸರ್ಕಾರದ ಮತ್ತು ಸಾರ್ವಜನಿಕರ ಹಣದ ಉಳಿತಾಯ ಮಾಡುವಂತಹ ಕರ್ನಾಟಕ ರಾಜ್ಯ ಸರ್ಕಾರದ ಅಧಿಕಾರಿ ಮತ್ತು ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಯೋಜನೆಯನ್ನು 2012 ರಿಂದ ಜಾರಿಗೆ ತರಲಾಗಿದೆ.

ಜಾಲತಾಣದಲ್ಲಿ ಮಾಹಿತಿ ವಿವರಗಳನ್ನು ದಾಖಲಿಸಲು ಯಾವುದೇ ರೀತಿಯ ತಾಂತ್ರಿಕ ಅಡಚಣೆ ಉಂಟಾದಲ್ಲಿ *HELPDESK* ದೂರವಾಣಿ ಮೂಲಕ *ಶ್ರೀ ಮಂಜುನಾಥ 08022230060* ಇವರನ್ನು ಕಚೇರಿ ವೇಳೆಯಲ್ಲಿ ಮಾತ್ರ ಸಂಪರ್ಕಿಸುವುದು.

ಪ್ರತ್ಯೇಕವಾಗಿ ಪ್ರಶಸ್ತಿ ಯೋಜನೆಯನ್ನು ಹೊಂದಿರುವ ಒಳಾಡಳಿತ ಇಲಾಖೆ ಮತ್ತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಮವಸ್ತ್ರ ಅಧಿಕಾರಿ /ಸಿಬ್ಬಂದಿಗಳನ್ನು ಹೊರತುಪಡಿಸಿ ಹಾಗೂ ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದವರನ್ನು ಪ್ರಶಸ್ತಿಗಾಗಿ ಪರಿಗಣಿಸುವುದು.

ಜಿಲ್ಲಾಮಟ್ಟದಲ್ಲಿ 10, ರಾಜ್ಯ ಮಟ್ಟದಲ್ಲಿ 30 ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದವರಿಗೆ ಗುಣಮಟ್ಟದ ಸ್ಮರಣೀಕೆ/ ನೆನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರಗಳನ್ನು ನೀಡಲಾಗುವುದು ಎಂದು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕೆ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜಿ.ಆರ್, ಖಜಾಂಚಿ ವಿರೇಶ್ ಬಿ, ರಾಜ್ಯ ಪರಿಷತ್ ಸದಸ್ಯ ಕೆ.ಟಿ ತಿಮ್ಮಾರೆಡ್ಡಿ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ನಾಮನಿರ್ದೇಶಿತ ಸದಸ್ಯರು ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.

 

Share This Article
Leave a Comment

Leave a Reply

Your email address will not be published. Required fields are marked *