ಬೆಳಗಾವಿ: ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣ ಹಾಕಿದ ಮಹಿಳೆಯನ್ನ ಕೆಲಸದಿಂದ ಅಮಾನತು ಮಾಡಲಾಗಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮಲ್ಲಮ್ಮನಿಗೆ ಮರಳಿ ಕೆಲಸ ಸಿಗಬೇಕೆಂಬ ಅಭಿಯಾನ ಆರಂಭವಾಗಿದೆ. ಸಾಕಷ್ಟು ಜನ ಮಲ್ಲವ್ವನ ಪರ ನಿಂತಿದ್ದಾರೆ.
ಅಷ್ಟೊಂದು ಭದ್ರತೆ ಇರುವ ಶಕ್ತಿ ಕೇಂದ್ರಕ್ಕೆ ಶಾವಿಗೆ ಬಂದದ್ದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡಿತ್ತು. ಸುವರ್ಣ ವಿಧಾನಸೌಧದ ಸ್ವಚ್ಛತೆ ಕೆಲಸಕ್ಕೆ ಬರುವ ಮಹಿಳೆಯೊಬ್ಬರು ಸಾಂಭ್ರಾದಿಂದ ಶಾವಿಗೆಯನ್ನು ತಂದು ಮಲ್ಲಮ್ಮಗೆ ಕೊಟ್ಟಿದ್ದಳು. ಮಲ್ಲಮ್ಮ ಶಾವಿಗೆಯನ್ನು ಇನ್ನಷ್ಟು ಒಣಗಿಸಬೇಕು ಎಂದು ಸೀರೆ ಹಾಸಿ ಒಣಹಾಕಿ, ಸ್ವಚ್ಛತಾ ಕೆಲಸ ಮಾಡುತ್ತಿದ್ದಳು. ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಧಾನಸೌಧದಲ್ಲಿ ಕುಳಿತು ಪೋರ್ನ್ ವಿಡಿಯೋ ನೋಡಿದವರಿಗೆ ಶಿಕ್ಷೆ ಕೊಡುವ ಬದಲು ಸರ್ಕಾರ ಅವರನ್ನ ಸಮರ್ಥಿಸಿಕೊಳ್ಳುತ್ತೆ. ಬಡವರು-ದುರ್ಬಲರನ್ನು ನೋಡಿದರೆ ಕಾನೂನುಗಳಿಗೂ ಎಲ್ಲಿಲ್ಲದ ಹುಮ್ಮಸ್ಸು ಬಂದುಬಿಡುತ್ತೆ. ಮಲ್ಲಮ್ಮನಿಗೆ ಆಕೆಯ ಕೆಲಸ ಸಿಗುವಂತಾಗಲಿ’. ಹೀಗೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಮಲ್ಲಮ್ಮನ ಪರ ‘ಐ ಸ್ಟ್ಯಾಂಡ್ ಯೂಥ್ ಮಲ್ಲವ್ವ’ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಮಲ್ಲವ್ವಗೆ ಕೆಲಸ ವಾಪಸ್ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.