ಸ್ಟಾರ್ ನಟಿ ಮನೆಗೆ ಸೊಸೆಯಾಗುತ್ತಿದ್ದಾರೆ ‘ಲಕ್ಷ್ಮೀನಿವಾಸ’ ನಟಿ : ಚಂದನಾ-ಪ್ರತ್ಯಕ್ಷ್ ಅವರದ್ದು ಲವ್ ಮ್ಯಾರೇಜ್..?

suddionenews
1 Min Read

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚಿನ್ನುಮರಿಯಾಗಿ ಚಂದನಾ ಕಾಣಿಸಿಕೊಳ್ಳುತ್ತಿದ್ದಾರೆ. ಸೈಕೋಪಾತ್ ಗುಣವಿರುವ ಗಂಡನನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ. ಜಾನವಿಯ ಸ್ಥಿತಿ ಕಂಡು ವೀಕ್ಷಕರು ಮರುಗುವವರೇ ಹೆಚ್ಚೆ. ಇಂಥ ಗಂಡನ ಜೊತೆ ಅದೇಗೆ ಸಂಸಾರ ಮಾಡ್ತಾಳೋ ಅಂತ. ಇದೀಗ ಚಂದನಾ ಅನಂತಕೃಷ್ಣ ಅವರು ರಿಯಲ್ ಲೈಫ್ ನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪ್ರತ್ಯಕ್ಷ್ ಎಂಬುವವರ ಜೊತೆಗೆ ಮದುವೆಯಾಗುತ್ತಿದ್ದಾರೆ.

ಚಂದನಾ ಸೊಸೆಯಾಗಿ ಹೋಗುತ್ತಿರುವುದು ಕಲಾವಿದರ ಕುಟುಂಬಕ್ಕೆ. ಅತ್ತೆ, ಮಾವ ಇಬ್ಬರು ಸ್ಟಾರ್ ಗಳೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ ಹಾಗೂ ನಟಿ ಲಲಿತಾಂಜಲಿ ಅವರ ಮನೆಗೆ ಸೊಸೆಯಾಗಿ ಹೋಗುತ್ತಿದ್ದಾರೆ.

ಉದಯ್ ಹುತ್ತಿನಗದ್ದೆ ಅವರು ಅಗ್ನಿಪರ್ವ, ಶುಭಮಿಲನ, ಜಯಭೇರಿ, ಉದ್ಭವ, ಅಮೃತ ಬಿಂದು, ಶಿವಯೋಗಿ ಅಕ್ಕಮಹಾದೇವಿ, ಉಂಡು ಹೋದ ಕೊಂಡು ಹೋದ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತ್ಯಕ್ಷ್ ಅವರ ತಾಯಿ ಕೂಡ ಕಲಾವಿದೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿನ್ನರಿ, ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇಂಥ ಕಲವಿದರ ಮನೆಗೆ ಚಂದನಾ ಅನಂತಕೃಷ್ಣ ಸೊಸೆಯಾಗಿ ಹೋಗ್ತಿದ್ದಾರೆ. ಇದೇ ನವೆಂಬರ್ 28 ರಂದು ಇಬ್ಬರ ಮದುವೆ ನಡೆಯಲಿದೆ. ರಾಜಾರಾಣಿ, ಹೂಮಳೆ ಧಾರಾವಾಹಿಯಲ್ಲಿ ಮಿಂಚಿದ್ದ ಚಂದನಾ ಈಗ ಲಕ್ಷ್ಮೀ ನಿವಾಸದಲ್ಲಿ ಅಭಿನಯಿಸ್ತಾ ಇದಾರೆ. ಚಂದನಾ ಹಾಗೂ ಪ್ರತ್ಯಕ್ಷ್ ಅವರದ್ದು ಲವ್ ಮ್ಯಾರೇಜ್ ಇರಬಹುದಾ ಎಂಬೆಲ್ಲಾ ಚರ್ಚೆಗಳನ್ನು ಅವರ ಫಾಲೋವರ್ಸ್ ಮಾಡುತ್ತಿದ್ದಾರೆ. ಆದರೆ ಮೂಲಗಳ ಪ್ರಕರಾ ಚಂದನಾ ಹಾಗೂ ಪ್ರತ್ಯಕ್ಷ್ ಅವರದ್ದು ಅಪ್ಪಟ ಅರೆಂಜ್ಡ್ ಮ್ಯಾರೇಜ್ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *